Sri Guru Kalpataru: Guru Purnima Significance, Guru Tattva and Devotion
Sri Guru Kalpataru: Guru Purnima Significance, Guru Tattva and Devotion

ಶ್ರೀ ಗುರು ಕಲ್ಪತರು: ಗುರು ಪೂರ್ಣಿಮೆಯ ಮಹತ್ವ, ಗುರು ತತ್ತ್ವ ಮತ್ತು ಗುರು ಭಕ್ತಿಯ ಸಂಪೂರ್ಣ ಮಾಹಿತಿ

Spread the love

ಗುರುವು ಪರಿಶುದ್ಧ, ಸತ್ಯನಿಷ್ಠ, ದಯಾಪರ ಮತ್ತು ಮಹಾಜ್ಞಾನಿ. ಜತೆಗೆ, ಭಗವಂತನನ್ನು ನಾವು ಎದುರಿಗೆ ಕಾಣಲಾರೆವು ಗುರುವನ್ನು ನಿಜಾ ಕಾರದಲ್ಲಿ ಎದರಿಗೇ ಕಾಣುತ್ತೇವೆ. ಹಾಗಾಗಿ, ಈಶ್ವರನಿಗೆ ಅಚಲ ಭಕ್ತಿ ಯಿಂದ ಪ್ರಾರ್ಥಿಸಿದರೆ ಏನೆಲ್ಲ ಅನುಗ್ರಹವನ್ನು ಪಡೆಯುತ್ತೇವೆಯೋ, ಗುರು ವಿನ ಪವಿತ್ರ ಪಾದಗಳನ್ನಪ್ಪಿ ಅವನಲ್ಲಿ ಶರಣಾದರೂ ಅವಕ್ಕೆಲ್ಲ ಪಾತ್ರರಾಗು ತ್ತೇವೆ. ಆದ್ದರಿಂದಲೇ ‘ಗುರುಭಕ್ತಿ’ಯನ್ನು ಕೊಂಡಾಡಲಾಗಿದೆ.

ಹೇಗಾದರೂ, ದೈವಭಕ್ತಿಯನ್ನು ಕಳೆದುಕೊಳ್ಳಬಾರದು. ಇಷ್ಟಕ್ಕೂ ಭಕ್ತರನ್ನೂ ಗುರುವನ್ನೂ ಒಂದೆಡೆಗೆ ತರುವವನೇ ದೇವರು. ದೇವರ ದಯೆ ಯಿಲ್ಲದೆ ಗುರುವು ಹೇಗೆ ತಾನೆ ನಮಗೆ ದೊರೆತಾನು? “ದೊಡ್ಡವಾದ ಮತ್ತು ಅಪರೂಪದ ಮೂರು ಅವಕಾಶಗಳು ಅಥವಾ ವರಗಳು ದೈವ ಕೃಪೆಯಿಂದ ಮಾತ್ರ ಒದಗುತ್ತವೆ. ಮೊದಲನೆಯದು ಮಾನವ ಜನ್ಮ ಎರಡನೆಯದು ಸತ್ಯವನ್ನು ಅರಿಯುವ ಅಭಿಲಾಷೆ, ಮೂರನೆಯದು ಮಹಾಪುರುಷರನ್ನು ಗುರುವಾಗಿ ಹೊಂದುವುದು.”

ಗುರುವಿಗಿಂದ ದೊಡ್ಡವನು ಯಾರೂ ಇಲ್ಲ. ನಮಗೆ ಅವನಲ್ಲಿ ಪೂರ್ಣ ವಿಶ್ವಾಸವಿರಬೇಕು. ಗುರುವು ತಂದೆ, ತಾಯಿ, ದೈವ ಮತ್ತು ಗುರುವೇ ಆಶ್ರಯ ದಾತ. ಶಿವನು ಮುನಿದರೆ ಗುರುವು ನಮ್ಮ ರಕ್ಷಣೆಗೆ ಬರುತ್ತಾನೆ. ಆದರೆ ಗುರುವು ಮುನಿದರೆ ನಮಗೆ ಯಾರೂ ನೆರವಾಗರು. ಈ ಕಾರಣಕ್ಕಾಗಿಯೇ ಶಾಸ್ತ್ರಗಳು ಗುರುಭಕ್ತಿಯ ಬಗ್ಗೆ ಅತಿಶಯವಾಗಿ ಹೊಗಳಿ ಹೇಳುತ್ತೇವೆ. ನಿನ್ನ ಗುರುವು ಮಹಾಗುಣಿಯಿಲ್ಲದಿದ್ದಾಗಲು ಅವನೊಬ್ಬ ಮಾರ್ಗದರ್ಶಿ ಎಂದು ಪರಿಗಣಿಸು. ಅದೇ ಹೊತ್ತಿಗೆ ಈಶ್ವರನಲ್ಲಿ ಭಕ್ತಿಯನ್ನಿಡು. ನಮ್ಮ ಭಕ್ತಿಯಿಂದ ಗುರುವಿಗಾಗಲಿ, ಈಶ್ವರನಿಗಾಗಲಿ ಏನೂ ಆಗ ಬೇಕಾಗಿಲ್ಲ. ಪ್ರತಿಫಲ ಸಿಗು ವುದು ನಮಗೆ. ಎಂಥ ಲಾಭ ಅಥವಾ ಎಂಥ ಪ್ರತಿಫಲ? ಈಗ ಹೇಳುತ್ತೇನೆ.

ನಮ್ಮಲ್ಲಿ ಕಲ್ಮಲ ತುಂಬಿದೆ. ಮನಸ್ಸು ಚಂಚಲವಾಗಿದೆ. ಒಂದು ಬಿಂದು ವಿನ ಮೇಲೆ ಒಂದೇ ಕ್ಷಣವಾದರೂ ಮನಸ್ಸು ನೆಟ್ಟು ಇರಲಾರೆವು. ನಿತ್ಯ ಶುದ್ಧನೂ ಪರಮಜ್ಞಾನಿಯೂ ಅಚಲನೂ ದೃಢನೂ ಆದ ಪರಮಾತ್ಮನ ಧ್ಯಾನ ಮಾಡಿದಾಗ ಅವನಂತೆಯೇ ಸಮಸ್ಥಿತಿಯನ್ನೂ ನಿಶ್ಚಲತೆಯನ್ನೂ ಹೊಂದುತ್ತೇವೆ. ನಾವೇ “ಅವನು” ಆಗುತ್ತೇವೆ. (ಅವನೊಡನೆ ಅಭೇದ ಹೊಂದುತ್ತೇವೆ) ಈಶ್ವರನೊಬ್ಬನನ್ನೇ ಹೀಗೆ ಧ್ಯಾನಿಸ ಬೇಕು ಎಂಬುದಲ್ಲ. ಆ ಲಕ್ಷಣಗಳನ್ನುಳ್ಳ ಮತ್ತಾವುದೇ ವಸ್ತು ಅಥವಾ ಮನುಷ್ಯ ಆಗಬಹುದು. ಅವನನ್ನೇ ಗುರು ಎಂದು ತಿಳಿದು ಭಕ್ತಿ ಹೊಂದಬೇಕು. ಆಗ ನಾವೇ ಆ ವಸ್ತುವೋ ಮನುಷ್ಯನೋ ಆಗಿ ಬಿಡುತ್ತೇವೆ. ಮನಸ್ಸು ನಿಶ್ಚಲವಾದಾಗ ಆತ್ಮವು ಪ್ರಕಾಶಿಸುತ್ತದೆ ಮತ್ತು ನಮ್ಮ ಸಹಜಾನಂದ ಸ್ಥಿತಿ ದಕ್ಕುತ್ತದೆ.

ಈಶ್ವರ ಭಕ್ತಿಗಾಗಲಿ, ಗುರುಭಕ್ತಿಗಾಗಲಿ ಬೇಕಾ ದುದು ನಿಶ್ಚಲ ಮನಸ್ಸು. ಅದನ್ನೇ ಶಾಸ್ತ್ರಗಳು ಲಭಿ ಸುತ್ತದೆ ಎಂದು ಛಾಂದೋಗೋಪನಿಷತ್ತು ಘೋಷಿ ಸುತ್ತದೆ. “ಆಚಾರ್ಯವಾನ್ ಪುರುಷೋ ವೇದ”. ಆಚಾರ್ಯನು ಯಾರಿಗುಂಟೋ ಅವನು ಮಾತ್ರ ಜ್ಞಾನವನ್ನು ಹೊಂದುತ್ತಾನೆ.

ಜಗದ್ಗುರು


“ಜಗದ್ಗುರು” ಎಂದೇ ಖ್ಯಾತರಾದ ಶಂಕರ ಭಗವತ್ಪಾದರು ಗುರುವಿನ ಪ್ರಾಮುಖ್ಯದ ಬಗೆಗೆ ಮತ್ತೆ ಮತ್ತೆ ಹೇಳುತ್ತಾರೆ, ಅವರು ಕೇಳುತ್ತಾರೆ. “ಒಬ್ಬ ಮನುಷ್ಯನು ಅನೇಕ ರೀತಿಯಿಂದ ಗಣ್ಯನಾದರೆ ತಾನೆ ಏನು?” ತನ್ನ ಗುರುವಿನ ಪಾದಕಮಲಗಳಲ್ಲಿ ಅವನ ಮನಸ್ಸು ನೆಲೆನಿಲ್ಲದ ಮೇಲೆ ಅದರಿಂದೇನು ಪ್ರಯೋಜನ? ಶಂಕರರು “ತತಃಕಿಮ್?” (ಅದರಿಂದರೇನು ಪ್ರಯೋ ಜನ?) ಎಂದು ನಾಲ್ಕು ಬಾರಿ ಪುನರಾವರ್ತಿಸು ತ್ತಾರೆ. “ತತಃಕಿಮ್ ತತಃಕಿಮ್?ತತಃಕಿಮ್?” ವಾಸ್ತವವಾಗಿ ಗುರುಸ್ತವನದಲ್ಲಿ (ಎಂಟು ಚರಣಗಳಲ್ಲಿ ರುವ ಅದನ್ನು ಗುರ್ವಷ್ಟಕಮ್ ಎಂದು ಕರೆದಿದ್ದಾರೆ) ಪ್ರತಿ ಚರಣದ ಕೊನೆಯಲ್ಲಿ ಈ ಪ್ರಶ್ನೆಯನ್ನು ನಾಲ್ಕು ಬಾರಿ ಕೇಳುತ್ತಾರೆ. ಅಂದರೆ ಒಟ್ಟಿಗೆ 32 ಬಾರಿ. ಕೊನೆಯದಾಗಿ, ಅವರ ಬಾಳಕೋಟಲೆಯನ್ನು ಕಿತ್ತೊಗೆಯುವ ಮುನ್ನ ಶಂಕರರು ಈ ಶ್ಲೋಕದ ಮೂಲಕ ತಮ್ಮ ಉಪದೇಶವನ್ನು ಶ್ರುತಪಡಿಸುತ್ತಾರೆ.

ಸದ್ವಿದ್ವಾನ್ ಉಪಕೃಪ್ಯತಾಮ್ ಪ್ರತಿದಿನಂ ತತ್ಪಾದುಕಾ ಸೇವ್ಯತಾಮ್ | ಬ್ರಹೈಕಾಕ್ಷರಮರ್ಥ್ಯತಾಮ್ ಶ್ರುತಿಶಿರೋವಾಕ್ಯಂ ಸಮಾಕರ್ಣ್ಯತಾಮ್.ಉಪದೇಶಪಂಚಕಮ್

ಅದರ ಅರ್ಥ ಹೀಗಿದೆ. ನಿನ್ನ ಆಚಾರ್ಯ ನಾಗಿ ಒಬ್ಬ ಸಾತ್ವಿಕನಾದ ವಿದ್ವಾಂಸನನ್ನು ಆರಿ ಸಿಕೊ. ಆತನ ಪದ ತಲ ದಲ್ಲಿ ನಿತ್ಯ ಉಪಾಸಿಸು. ಪ್ರಣವ ಮಂತ್ರ (ಓಂಕಾರ) ದ ಬಗೆಗೂ ಉಪನಿಷತ್ತಿನ ಮಹಾ ಕಾವ್ಯಗಳ ಬಗೆಗೂ ಅವನಿಂದ ಉಪದೇಶ ಹೊಂದು.

ಗುರುಪಾದಗಳಿಗೆ (ಗುರುವಿನ ಪಾದ ಕಮಲಗಳಿಗೆ) ಪೂಜೆ ಮಾಡುವ ಬಗೆಗಿನ ಈ ಆದೇಶಕ್ಕೆ ಅನುಗುಣವಾಗಿ, ಇಂದಿಗೂ ನಿತ್ಯವೂ ಕಾಂಚಿಮಠದಲ್ಲಿ ಶಂಕರ ಭಗವತ್ಪಾದರ ಪಾದ ಕಮಲಗಳಿಗೆ ಪೂಜೆಯು ತಪ್ಪದೆ ನಡೆಯುತ್ತಿದೆ.

ತನ್ನ ಶಿಷ್ಯನಿಗೆ ಸಂನ್ಯಾಸ ದೀಕ್ಷೆ ಕೊಡುವ ಸಂನ್ಯಾಸ-ಗುರುವಿನ ಬಗೆಗಿನ ಆದೇಶ ಇದು. ಸಂನ್ಯಾಸಾಶ್ರಮದಲ್ಲಿ ಗೃಹಸ್ಥಾಶ್ರಮಿಯಾದ ಒಬ್ಬ ಗುರುವನ್ನು ಆಶ್ರಯಿಸಿ ವೇದ ಗಳನ್ನೂ ಶಾಸ್ತ್ರವು ವಿಧಿಸಿದ ಕರ್ತವ್ಯಗಳನ್ನೂ ಅವನಿಂದ ಕಲಿಯಬೇಕು. ಅನುಕ್ರಮವಾಗಿ ಕೊನೆಯ ಆಶ್ರಯವಾದ ಸಂನ್ಯಾಸಕ್ಕೆ ಕಾಲಿಡಬೇಕು. ಅದು ಶಂಕರರ ಉಪದೇಶ ವಾಗಿದೆ.

ಮೊದಲು, ವೈದಿಕ ಕರ್ಮವು ವಿಕಿರಬೇಕು ಎಂಬುದನ್ನು ಪರಿಗಣಿಸೋಣ. ಗುರುವಿನಿಂದ ಹೊಮ್ಮಿದ ಪ್ರಣವ ಮತ್ತು ಮಹಾಕಾವ್ಯದ ಸಂದೇಶವು ಒಬ್ಬನನ್ನು ಮಾನವನ ಆತ್ಯಂತಿಕ ಗುರಿಯಾದ ಮೋಕ್ಷದೆಡೆಗೆ ಮುನ್ನಡೆಸಬೇಕು. ಅದಕ್ಕಾಗಿ ಮನಸ್ಸನ್ನು ನಿಗ್ರಹಿಸಬೇಕು. ಶಾಂತಸ್ಥಿತಿಯಲ್ಲಿಡ ಬೇಕು.

ಮನಸ್ಸನ್ನು ತನ್ನೊಳಗೆ ಪೂರ್ಣವಾಗಿ ವಿಕಾಗ್ರಗೊಳಿ ಸದೆ ಗುರುವಿನ ಮಾತನ್ನು ಶ್ರವಣ ಮಾಡುವುದರಿಂದ ಪ್ರಯೋ ಜನವಿಲ್ಲ. ಚೆನ್ನಾಗಿ ಉತ್ತ ಹೊಲದಲ್ಲಿ ಬಿತ್ತಿದ ಬೀಜವು ಮೊಳಕೆ ಯೊಡೆಯುತ್ತದೆ. ನಾವು ಧಾರ್ಮಿಕವಾದ ಮತ್ತು ತತ್ವ ಜ್ಞಾನದ ಅಸಂಖ್ಯಾತ ಪ್ರವ ಚನಗಳನ್ನು ಕೇಳುತ್ತೇವೆ.

ಗೀತೆಯನ್ನೂ ಇತರ ಧರ್ಮ ಗ್ರಂಥ ಗಳನ್ನೂ ಪಠಿಸು ತ್ತೇವೆ. ಆದರೂ ಏಕೆ ನಮಗೆ ದುಃಖದ ಅನುಭವವಾಗು ತ್ತದೆ? ನಾವೇಕೆ ಜ್ಞಾನ
ದೀಪ್ತರಾಗುವುದಿಲ್ಲ? ಏಕೆಂದರೆ ನಮ್ಮ ಚಿತ್ತ ಅಥವಾ ಪ್ರಜ್ಞೆ ಯನ್ನು ಶುದ್ಧಗೊಳಿಸಿಕೊಳ್ಳದೆ ಧಾರ್ಮಿಕ ಪ್ರವಚನಗಳನ್ನು ಕೇಳುತ್ತೇವೆ. ಧರ್ಮ ಗ್ರಂಥಗಳನ್ನು ಪರಿಸುತ್ತೇವೆ. ಹಾಗಾಗಿ ಶಾಶ್ವತವಾದ ಫಲ ಆದರಿಂದ ದೊರಕುವುದಿಲ್ಲ.

“ಮತ್ತೆ ಮತ್ತೆ ವೈದಿಕ ಕರ್ಮಗಳನ್ನು ಮಾಡಿ ಈಶ್ವರನಿಗೆ ಶರಣಾಗಿ, ಪ್ರತಿಫಲದ ಚಿಂತೆಯನ್ನು ಬಿಡಿ, ಭಗವದಾರಾಧನೆ ಯೆಂದು ತಿಳಿದು ಮಾಡಿ” ಆಚಾರ್ಯರು ತಮ್ಮ ಉಪದೇಶದ ಪ್ರಾರಂಭದಲ್ಲಿಯೇ ಹೇಳುವ ಮಾತು ಇದು. ಚಿತ್ತಶುದ್ದಿಯನ್ನೂ ಮನಃಶಾಂತಿ ಯನ್ನೂ ಸಾಧಿಸುವ ಮಾರ್ಗವನ್ನು ತೋರಿಸಲೆಂದು ಅವರು ಹಾಗೆ ಹೇಳಿದ್ದಾರೆ. ವೈದಿಕ ಕರ್ಮಗಳಿಂದ ಮನಸ್ಸನ್ನು ಉಳ ಬೇಕು.
ಅದು ಪ್ರಪ್ರಥಮವಾಗಿ ಆಗಬೇಕು. ಉತ್ತ ಮೇಲೆ ಮನ ಸ್ಸಿಗೆ ನೀರು ಹಾಯಿಸಬೇಡವೇ?ಆ ಕೆಲಸವೇ ಭಕ್ತಿ, ಭಕ್ತಿಯೇ ಹೃದಯಕ್ಕೆ ನೀರೆರೆಯುವಂಥದು. ಈಶ್ವರನಲ್ಲಿಯೂ, ಆಚಾರ್ಯನಲ್ಲಿಯೂ ಭಕ್ತಿ ಇರಲೇಬೇಕು. ಗುರುಭಕ್ತಿ ಇದ್ದರೆ ನಮ್ಮ ಮನಸ್ಸು ನಿರ್ಮಲವಾಗುತ್ತದೆ.

ಹಿರಿಯರ ಮತ್ತು ಇತರ ಮಹಾತ್ಮರ ಮುಂದೆ ವಿನನ್ನಾ ದರೂ ಓದಿದಾಗ ಅಥವಾ ಅವರ ಮಾತನ್ನು ಕೇಳಿದಾಗ, ನಮ್ಮ ಮನಸ್ಸಿನ ಮೇಲೆ ಪ್ರಭಾವವಾಗುತ್ತದೆ. ಏಕೆಂದರೆ ಅವರ ಸನ್ನಿಧಿಯಲ್ಲಿ ನಮ್ಮ ಮನಸ್ಸು ಸಮಾಧಾನಗೊಳ್ಳುತ್ತದೆ. ಸ್ನೇಹಕೂಟಗಳಲ್ಲಿಯೋ ಗ್ರಂಥಾಲಯದಲ್ಲಿಯೋ ಅದು ಹಾಗಾಗುವುದಿಲ್ಲ. ಅಲ್ಲಿ ಓದಿದ್ದಾಗಲಿ, ಕೇಳಿ ದ್ದಾಗಲಿ ಭದ್ರವಾಗಿ ಉಳಿಯುವುದೂ ಇಲ್ಲ. ಗುರುಭಕ್ತಿಯಿಂದ ಮನಸ್ಸು ಆರ್ದ ವಾದರೆ ತತ್‌ಕ್ಷಣದ ಫಲ ದೊರೆಯುತ್ತದೆ. ಆದ್ದರಿಂದಲೇ ನಾವು ಮಹಾತ್ಮರಿಂದ ಹಿತಬೋಧೆಯನ್ನೂ ಸ್ಫೂರ್ತಿಯನ್ನೂ ಹೊಂದಬೇಕು ಮತ್ತು ಗುರುವಿನಿಂದ ಕಲಿಯಬೇಕು. ನಾವು ಅಷ್ಟೊಂದು ಓದುತ್ತೇವೆ. ಆದರೂ ನಮ್ಮ ಅಜ್ಞಾನವು ತೊಲಗುವುದಿಲ್ಲ. ನಮ್ಮ ಅಜ್ಞಾನದ ತೆರೆ ಎಲ್ಲಿ ಸರಿಯುವುದೋ ಜ್ಞಾನವು ಉದಿ ಸುವುದೋ ಅಂಥ ಎಡೆಗೆ ನಾವು ಹೋಗಬೇಕು. ಅದೆಂದರೆ ಆಚಾರ್ಯರು ಇರುವ ಜಾಗವೇ ಆಗಿದೆ.


ಬ್ರಹ್ಮಚರ್ಯಾಶ್ರಮದಲ್ಲಿ ಗುರುವಿನಿಂದ ವೇದಾಧ್ಯಯನ ಮಾಡಬೇಕು. ಆದರಿಂದ ನಮ್ಮ ಚಿತ್ತ ಶುದ್ದಿ ಸಿದ್ಧಿಸುತ್ತದೆ. ಗೃಹಸ್ಥಾಶ್ರಮದಲ್ಲಿ ವೇದ ವಿಹಿತ ಕರ್ಮಗಳನ್ನು ಮಾಡಿ ಮನಸ್ಸಿನ ಕಲ್ಮಷಗಳನ್ನೆಲ್ಲ ಹೋಗಲಾಡಿಸಿಕೊಳ್ಳಬೇಕು. ಇದಾದ ಮೇಲೆ ಸಂನ್ಯಾಸಿಯಾಗಿರುವ ಗುರುವೊಬ್ಬನಿಂದ ಮಹಾ ವಾಕ್ಯಗಳನ್ನು ಕಲಿಯಬೇಕು. ಹೀಗೆ ಕಲಿತದ್ದು ಮೊಳೆತು ಬೆಳೆಯುತ್ತದೆ. ಬೇರೆ ಮಾತುಗಳಲ್ಲಿ ಹೇಳಬೇಕಾದರೆ ಜೀವವು ಬ್ರಹ್ಮನೊಡನೆ ಒಂದಾಗುತ್ತದೆ. ಈ ಗುರಿಯನ್ನು ತಲುಪುವ ಮಾರ್ಗವನ್ನು ತಿಳಿಯಲು, ನಮ್ಮ ಸಾಧನಾ ಮಾರ್ಗದ ಪ್ರಾರಂಭದಲ್ಲಿಯೂ ಮುಕ್ತಾಯದ ಹಂತದಲ್ಲಿಯೂ ನಮ ಗೊಬ್ಬ ಗುರುಬೇಕು. ಈ ಕಾರಣದಿಂದಾಗಿಯೇ ಗುರುಭಕ್ತಿಯನ್ನು ಜಗತ್ತಿನಾದ್ಯಂತ ಕೊಂಡಾಡ ಲಾಗಿದೆ. ಆಚಾರ್ಯರೆಂದು ಕೂಡಲೆ ನಮಗೆ ನೆನಪಾಗುವುದು ತೈತ್ತರೀಯ ಉಪನಿಷತ್ತು,ಕೃಷ್ಣ ಯಜುರ್ವೇದದಲ್ಲಿ ಬರುವ ಈ ಉಪನಿಷತ್ತಿನ ಮಂತ್ರಗಳ ಹಿರಿಮೆಯ ಸ್ವರಸಂಯೋ ಜನೆ,ಲಯ, ವಿನ್ಯಾಸ ಹಾಗೂ ಗೇಯತೆ.

ಈ ಉಪನಿಷತ್ತಿನ ಆರಣ್ಯಕ ವಿಭಾಗದ ಶಿಕ್ಷಾವಲಿ ಗುರುಕುಲಗಳಲ್ಲಿ ಗುರುಗಳ ಹಾಗೂ ಶಿಷ್ಯರ ಕರ್ತವ್ಯ ಬಂಧ ಅನುಬಂಧ, ಗುರು ದಕ್ಷಿ ಣೆಯ ಮಹತ್ತ್ವ ಇತ್ಯಾದಿ ವಿಷಯಗಳಿಗೆ ಮಾರ್ಗ ದರ್ಶಿಯಾಗಿದೆ. ಶಿಕ್ಷಾವಲ್ಲಿಯ ಹನ್ನೊಂದನೆಯ ಅನುವಾಕದಲ್ಲಿ ಗುರುಕುಲದಲ್ಲಿ ಅಧ್ಯಯನ ಮುಗಿಸಿ ಸ್ವತಂತ್ರ ಬದುಕಿನೆಡೆಗೆ ನಡೆಯುವ ವಿದ್ಯಾರ್ಥಿಗಳಿಗೆ ಗುರುಗಳು ಮಾಡುವ ಅಂತಿಮ ಪಾಠ ಹೀಗಿದೆ.

ಮಾತೃದೇವೋಭವ, ಪಿತೃದೇವೋಭವ, ಆಚಾರ್ಯದೇವೋಭವ, ಅತಿಥಿದೇವೋಭವ ನಿನಗೆ ಜನ್ಮ ಕೊಟ್ಟ ಮಾತೆಗೆ ಸಮಾನರಾರು? ಆಕೆಯನ್ನು ದೇವತೆಯಂತೆ ಕಾಣು. ಪಿತೃವಿಲ್ಲದೆ ನೀನಿಲ್ಲ. ಅದಕ್ಕಾಗಿ ತಂದೆಯನ್ನು ಪ್ರತ್ಯಕ್ಷ ದೇವ ರೆಂದು ಪರಿಗಣಿಸು. ಇನ್ನು ನಿನ್ನ ಶಿಲಾಕಾಯಕ್ಕೆ ಜ್ಞಾನಪ್ರದಾನ ಮಾಡಿ ರೂಪುಗೊಳಿಸಿದ ಆಚಾ ರ್ಯರನ್ನು ಮರೆಯಲಾದೀತೆ? ಅವರೂ ನಿನಗೆ ದೇವ ಸಮಾನರೆ. ಅವರ ವಾಕ್ಯವನ್ನು ದೈವವಾಕ್ಯವೆಂದೇ ಪರಿಗಣಿಸು. ಕರೆದಾಗ ಬರುವವರು ಅಭ್ಯಾಗರು. ಆದರೆ ಕರೆಯದೆ ಅನಿರೀಕ್ಷಿತವಾಗಿ ಆಗಮಿಸು ವವರು ಅತಿಥಿಗಳು, ಅವರನ್ನು ಅಕ್ಕರೆಯಿಂದ ಪ್ರೀತಿಯಿಂದ ಆದರಿಸು. ಏಕೆಂದರೆ ಅವರ ಆಗ ಮನ ಕೂಡ ದೈವ ಸಂಕಲ್ಪದಿಂದಲೆ.


Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *