ಅಧಿಕ ಮಾಸ
ಪುರುಷೋತ್ತಮ ಮಾಸ ಅಥವಾ ಅಧಿಕ ಮಾಸವು ಶ್ರೀಕೃಷ್ಣನು ಬಾಲ್ಯದಲ್ಲಿ ಕಳೆದಿದ್ದ ವೃಂದಾವನದ ಸುತ್ತಮುತ್ತ ಅನ ಪ್ರದೇಶಗಳಿಗೆ ವಿಶೇಷ ಮಹತ್ವ ಕೊಡುತ್ತದೆ. ಶ್ರೀಕೃಷ್ಣ ಪುರುಷೋತ್ತಮನಾಗಿ ತನ್ನ ಲೀಲೆಗಳಿಂದ ಜೊತೆಯಲ್ಲಿದ್ದವರಿ ಗೆಲ್ಲಾ ಸುಖ ಸಂತೋಷಗಳನ್ನು ನೀಡುತ್ತಿದ್ದ.
ವೃಂದಾವನ ಮತ್ತು ಮಥುರಾಗಳಲ್ಲಿ ವಿಶೇಷವಾದ ಪ್ರಾರ್ಥನೆ,ಸೇವೆ,ಕೀರ್ತನೆಗಳು, ಅಖಂಡ ಹರಿಭಜನೆ ಮುಂತಾದ ಕಾರ್ಯಕ್ರಮಗಳನ್ನು ಮಾಡುತ್ತಾರೆ. ಅಧಿಕಮಾಸ ದಲ್ಲಿ ಮಾಡಿದ ವ್ರತ ಪೂಜೆಗಳಿಗೆ ವಿಶೇಷ ಫಲವಿದೆ ಎನ್ನುವುದು ನಂಬಿಕೆ. ಗೋವರ್ಧನಗಿರಿ, ಸುತ್ತುವಿಕೆ, ಯಮುನಾ ಘಾಟ್ ನಲ್ಲಿ ಭಗವದ್ಗೀತೆ ಪಠಣ, ಮಹಾ ಆರತಿ ಮುಂತಾದುವುಗಳೆಲ್ಲಾ ನೇರ ಶ್ರೀ ಕೃಷ್ಣನನ್ನು ತಲುಪುತ್ತವೆ ಎನ್ನುವ ನಂಬಿಕೆ ಇದೆ. ಅಧಿಕಮಾಸದ ಆಚರಣೆ ಬಗೆಗೆ ಬೃಹನ್ನಾರದೀಯ ಪುರಾಣ ದಲ್ಲಿ ಹೀಗೆ ಹೇಳಿದೆ.
ವಿಕಾನ್ನೇನ ನರೋ ತಸ್ತು ಮಲಮಾಸಂ ನಿಷೇವತೇ। ಚತುರ್ಭುಜೋ ನರೋ ಭೂತ್ವಾ ಸ ಯಾತಿ ಪರಮಾಂ ಗತಿಮ್ ವಿಕಾನ್ನಾನ್ನಾಪರಂ ಕಿಂಚಿತ್ ಪವಿತ್ರಮಿಹ ವಿದ್ಯತೇ।
ವಿಕಾನ್ನನ್ನುಯಂ ಸಿದ್ಧಾಃ ಪರಂ ನಿರ್ವಾಮಾಗತಾಃ
ಒಂದು ಬಾರಿ ಮಾತ್ರ ಮಾಡಿದ ಊಟ ಕುಡಿದ ನೀರು ಎಂಬ ವಿಕಾನ್ನಭೋಜನದ ವ್ರತ ಅಧಿಕ ಮಾಸದಲ್ಲಿ ವಿಶೇಷ ವಾಗಿ ವಿಹಿತ. ಇದನ್ನು ಆಚರಿಸುವವರು ಚತುರ್ಭುಜದಿಂದ ಕೂಡಿದ ಸರೂಪ್ಯ ಮುಕ್ತಿಯನ್ನು ಪಡೆಯುತ್ತಾರೆ. ಈ ವ್ರತಕ್ಕೆ ಸಮನಾದ ಬೇರೊಂದು ಪವಿತ್ರ ವ್ರತ ಇಲ್ಲ. ಇದರ ಅನುಷ್ಠಾನದಿಂದ ಮುನಿಗಳು ಶ್ರೇಷ್ಠ ಸಿದ್ಧಿಯನ್ನು ಪಡೆದಿರುವವರು.
ಅಧಿಕಮಾಸದ ವೈಜ್ಞಾನಿಕ ಕಾರಣ
ಚಾಂದ್ರಮಾನ ವರ್ಷ (354 ದಿನಗಳು) ಮತ್ತು ಸೌರ ಮಾನ (365 ದಿನಗಳು) ಗಳ ನಡುವಿನ ಸುಮಾರು 11 ದಿನ ಗಳ ವ್ಯತ್ಯಾಸವನ್ನು ಸರಿದೂಗಿಸಲು ಅಧಿಕಮಾಸವನ್ನು ಸೇರಿಸಲಾಗುತ್ತದೆ. ಇದು ಸರಿಸುಮಾರು 32 ರಿಂದ 33 ತಿಂಗಳುಗಳಿಗೆ, ಅಂದರೆ ಸುಮಾರು ಮೂರು ವರ್ಷಗಳಿ ಗೊಮ್ಮೆ ಬರುತ್ತದೆ.
ಇನ್ನೂ ಒಂದು ವಿಶೇಷ ಎಂದರೆ ಯಾವ ಚಂದ್ರಮಾಸ ದಲ್ಲಿ ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಂಕ್ರಮಿಸುವುದಿಲ್ಲವೋ (ಸಂಕ್ರಾಂತಿ ಆಗುವುದಿಲ್ಲವೋ ) ಆ ತಿಂಗಳನ್ನು ಅಧಿಕ ಮಾಸ ಎಂದು ಪರಿಗಣಿಸಲಾಗುತ್ತದೆ.
ಪುರುಷೋತ್ತಮ ಮಾಸ
ಪುರಾಣಗಳ ಪ್ರಕಾರ ಎಲ್ಲಾ 12 ತಿಂಗಳುಗಳಿಗೂ ದೇವತೆಗಳಿದ್ದಾರೆ. ಆದರೆ ಮೂರು ವರ್ಷಗಳಿಗೊಮ್ಮೆ ಬರುವ ಅಧಿಕಮಾಸಕ್ಕೆ ಇಂಥದೇ ದೇವತೆ ಎಂದು ನಿಗದಿಯಾಗಿರ ಅಲ್ಲ. ಅಧಿಕ ಮಾಸವು ವಿಷ್ಣುವಿನ ಮೊರೆ ಹೋದಾಗ ವಿಷ್ಣು ಈ ಮಾಸವನ್ನು ಪುರುಷೋತ್ತಮ ಮಾಸ ಎಂದು ಕರೆದು ತಾನೇ ಈ ಮಾಸದ ಅಧಿಪತಿಯಾಗುತ್ತಾನೆ. ಹೀಗಾಗಿ ಅಧಿಕ ಮಾಸದಲ್ಲಿ ನಡೆಸುವ ಎಲ್ಲ ಧಾರ್ಮಿಕ ಕಾರ್ಯಗಳೂ, ದಾನ ಧರ್ಮಗಳೂ ವಿಷ್ಣುಗೇ ಸಮರ್ಪಿತವಾಗುತ್ತದೆ.
ಅಧಿಕಮಾಸದ ಮಹತ್ವ
ಅಧಿಕ ಮಾಸ ದಲ್ಲಿ ಮಾಡುವ ವಿಷ್ಣು ಸಹಸ್ರನಾಮ ಪಠಣ, ಪುರುಷಸೂಕ್ತ ಪಠಣ ಮತ್ತು ನಾರಾಯಣನ ಆರಾಧ ನೆಗೆ ವಿಶೇಷ ಮಹತ್ವಗಳಿವೆ. “ಅಧಿಕಸ್ಯ ಅಧಿಕ ಫಲಂ” ಎನ್ನುವಂತೆ ಅಧಿಕ ಮಾಸದಲ್ಲಿ ಮಾಡುವ ದಾನ, ಧರ್ಮ, ಪುಣ್ಯ ಕಾರ್ಯಗಳಿಗೆ ಹೆಚ್ಚಿನ ಫಲ ದೊರೆಯುತ್ತದೆ ಎನ್ನಲಾಗಿದೆ. ಇದರ ಜೊತೆಗೆ ಅಧಿಕ ಮಾಸದಲ್ಲಿ ಮಾಡುವ ಜಪ, ತಪಸ್ಸು, ದಾನ ಮತ್ತು ವ್ರತಗಳಿಂದ ಭಕ್ತರಲ್ಲಿ ಸಂಚಿತ ಪಾಪಗಳೇ ನಾದರೂ ಇದ್ದರೆ ಅವುಗಳೂ ಕೂಡಾ ನಶಿಸಿ ಹೋಗುತ್ತದೆನ್ನುವ ನಂಬಿಕೆ ಇದೆ.
ಅಧಿಕ ಮಾಸದ ಆಚರಣೆ
ಪ್ರತೀದಿನ ಸಂಜೆ ದೇವರ ಮುಂದೆ ದೀಪ ಬೆಳಗುವುದು ಮತ್ತು ದೀಪ ದಾನ ಮಾಡುವುದು ಶ್ರೇಷ್ಠ. 33 ಅತಿರಸ (ಅಪೂಪ ಅಥವಾ ಕಜ್ಜಾಯಗಳನ್ನು) ತುಂಬಿದ ಪಾತ್ರೆ ಸಮೇತ ದಾನ ಮಾಡುವುದು ಅತ್ಯಂತ ಮಹತ್ವದ್ದು ಎನ್ನ ಲಾಗಿದೆ. ಅಧಿಕ ಮಾಸಾಚರಣೆ ಮಾಡುವ ಭಕ್ತರು ಇಡೀ ತಿಂಗಳು ನಿಯ ಮಿತ ಆಹಾರ ಸೇವನೆ ಮಾಡುವುದು ಅವಶ್ಯಕ.
ಶಾಸ್ತ್ರಗಳ ಪ್ರಸ್ತುತಿ
ಪ್ರತಿಯೊಂದು ಮಾಸದಲ್ಲಿ ಒಂದೊಂದು ರಾಶಿಯಲ್ಲಿ ಸೂರ್ಯನ ಸಂಕ್ರಮಣವಾಗುತ್ತದೆ. ಆದರೆ ಅಧಿಕ ಮಾಸದಲ್ಲಿ ಯಾವುದೇ ರಾಶಿಯಲ್ಲೂ ಸೂರ್ಯ ಸಂಕ್ರಮಣ ಆಗುವುದಿಲ್ಲ ಅಂದರೆ ಸೂರ್ಯ ಯಾವುದೇ ರಾಶಿಗೂ ಪ್ರವೇಶ ಮಾಡುವುದಿಲ್ಲ. ಆದುದರಿಂದ ಸೂರ್ಯ ಮತ್ತು ಚಂದ್ರ ಇವರುಗಳ ಚಲನೆಯಲ್ಲಿ ವ್ಯತ್ಯಾಸವಾಗುತ್ತದೆ. ನೈಸರ್ಗಿಕ ವಾತಾವರಣದಂತೆ ಜನರ ಆರೋಗ್ಯದಲ್ಲಿಯೂ ವ್ಯತಿರಿಕ್ತ ಪರಿಣಾಮಗಳು ಬೀರುತ್ತವೆ. ಇವುಗಳನ್ನು ತಡೆ ಯುವುದಕ್ಕೆ ಅಧಿಕ ಮಾಸದಲ್ಲಿ ವ್ರತಗಳು ಹೋಮಗಳು, ಹವನಗಳು, ಪುರಾಣ ಪುಣ್ಯಕಥೆಗಳ ಪಠಣ ಮತ್ತು ಶ್ರವಣ, ಸದಾ ದೇವತಾರಾಧನೆ, ವಿಶೇಷವಾಗಿ ವಿಷ್ಣುವಿನ ಆರಾಧನೆ ಮಾಡಬೇಕು ಎಂದು ಹೇಳಲಾಗುತ್ತದೆ.
ಅಧಿಕ ಮಾಸದ ಮಹತ್ವ
ಧರ್ಮಗ್ರಂಥಗಳ ಪ್ರಕಾರ ಮಾನವ ದೇಹ ನೀರು, ಬೆಂಕಿ, ಗಾಳಿ, ಆಕಾಶ, ಮತ್ತು ಭೂಮಿ ಎನ್ನುವ ಪಂಚಭೂತಗಳಿಂದ ಮಾಡಲ್ಪಟ್ಟಿದೆ. ಇವುಗಳ ಸಮತೋಲನದಿಂದ ವ್ಯಕ್ತಿ ತನ್ನ ಜೀವನವನ್ನು ಸುಗಮವಾಗಿ ನಡೆಸಿಕೊಂಡು ಹೋಗಲು ಸಾಧ್ಯವಾಗುತ್ತದೆ. ಅಧಿಕ ಮಾಸದಲ್ಲಿ ದೇವತಾ ಕಾರ್ಯ, ಆರಾ ಧನೆ, ಧ್ಯಾನ, ತಪ ಮುಂತಾದುವುಗಳನ್ನು ಮಾಡುವುದರಿಂದ ಈ ಐದರ ಸಮತೋಲನವನ್ನು ಕಾಪಾಡಿಕೊಂಡು ಹೋಗುವುದು ಸಾಧ್ಯವಾಗುತ್ತದೆ. ಜೊತೆಗೆ 33 ಕೋಟಿ ದೇವತೆಗಳನ್ನೂ, ತೃಪ್ತಿ ಪಡಿಸಿದಂತಾಗುತ್ತದೆ ಎನ್ನ ಲಾಗಿದೆ. ಹೀಗಾಗಿ ಅಧಿಕ ಮಾಸಕ್ಕೆ ವಿಶೇಷ ಮಹತ್ವವಿದೆ.
ಯಾರು ಈ ಅಧಿಕ ಮಾಸದಲ್ಲಿ ಆಧ್ಯಾತ್ಮ ಗ್ರಂಥಗಳ ಪಠಣ, ಉಪ ನ್ಯಾಸ, ದಾನ, ಧರ್ಮಗಳನ್ನು ಮಾಡುವರೇ ಅವರಿಗೆ ಅಧಿಕ ಫಲ ದೊರೆಯುವುದರ ಜೊತೆಗೆ ಅವರು ಮಾಡಿರ ಬಹುದಾದ ಪಾಪಕರ್ಮಗಳ ಫಲಗಳಿಂದಲೂ ಮುಕ್ತಿ ಸಿಗುತ್ತದೆ ಎಂದು ಸಾಕ್ಷಾತ್ ವಿಷ್ಣು ಹೇಳಿದ್ದಾನೆ. ಪುರಾಣಗಳ ಪ್ರಕಾರ, ವಿಷ್ಣು ನರಸಿಂಹಾವತಾರ ತಾಳಿ ಹಿರಣ್ಯ ಕಶಿಪುನನ್ನು ಕೊಂದಿದ್ದು ಇದೇ ಅಧಿಕ ಮಾಸದಲ್ಲೇ ಅಂದರೆ ಹಗಲೂ ಅಲ್ಲದ ರಾತ್ರಿಯೂ ಅಲ್ಲದ ಸಂಧ್ಯಾಕಾಲದಲ್ಲಿ, ಮನೆಯ ಒಳಗೂ ಹೊರಗೂ ಅಲ್ಲದೇ ಮನೆಯ ಹೊಸಿಲಿನಲ್ಲಿ ಹಿರಣ್ಯಕಶಿಪುನನ್ನು ಕೊಂದಿದ್ದು. ನನ್ನನ್ನು ಯಾವುದೇ ತಿಂಗಳಿನಲ್ಲಿಯೂ ಯಾವುದೇ ಶಕ್ತಿಯೂ ಕೊಲ್ಲ ಬಾರದು ಎನ್ನುವ ವರ ಪಡೆದಿದ್ದ ಹಿರಣ್ಯಕಶಿಪುವನ್ನು ಈ ಅಧಿಕ ಮಾಸದಲ್ಲಿ ಕೊಲ್ಲಲಾಯಿತು.
ರಾಜ ನಹುಷ ಈ ಅಧಿಕ ಮಾಸದಲ್ಲೇ ಉಪ ವಾಸ ಮಾಡಿದ್ದು ಮತ್ತು ತನ್ನ ಎಲ್ಲಾ ಪಾಪಗ ಳಿಂದಲೂ ಮುಕ್ತಿ ಹೊಂದಿ ಕಡೆಗೆ ಇಂದ್ರನ ಸಿಂಹಾ ಸನವನ್ನು ವಿರಿದ್ದು. ಹೀಗಾಗಿ ಅಧಿಕ ಮಾಸದ ಆಚರಣೆ ನಮ್ಮ ಸನಾತನ ಸಂಪ್ರದಾಯಗ ಳಿಂದಲೂ ನಡೆದುಕೊಂಡು ಬಂದಿರುವುದರಿಂದ ಇಂದಿಗೂ ಅಧಿಕ ಮಾಸದ ಆಚರಣೆ ಜನಮಾನಸ ದಲ್ಲಿ ಸೇರಿದೆ.