ಹಿಂದಿನ ವಿವರಣೆಯಲ್ಲಿ ತಿಳಿಸಿರುವಂತೆ ಋಷಿಗಳು ಜಗತ್ಕಾರಣದ ಅನ್ವೇಷಣೆಗೆ
ಈವರೆಗೆ ತಾವು ಬೌದ್ಧಿಕವಾಗಿ ಚಿಂತಿಸಿದ ಪ್ರಯತ್ನದಲ್ಲಿ ಐಕಮತ್ಯವನ್ನು ಸಾಧಿಸಲಾಗದೆ
ಹೋದದ್ದರಿಂದ ಆ ಮಾರ್ಗವನ್ನು ಕೈಬಿಟ್ಟರು.
ಋಷಿಗಳ ಜಿಜ್ಞಾಸಾಗೋಷ್ಠಿಯನ್ನು ಕುರಿತು ಹಿಂದೆ ಪ್ರಸ್ತಾಪಿಸಲಾಗಿದೆ. ಅವರುಗಳು ಜಗತ್ಕಾರಣವನ್ನು ಕಂಡುಕೊಳ್ಳಲು ವಿಚಾರಮಾಡಲಾರಂಭಿಸಿದಾಗ ಹೊಳೆದ ಕೆಲವು ತತ್ತ್ವಗಳನ್ನು ಈಗ ಪ್ರಸ್ತಾಪಿಸಲಾಗುವದು.