Indian Women’s Dharma: Complete Guide to Nari Shakti, Culture, Family and Duties
Indian Women’s Dharma: Complete Guide to Nari Shakti, Culture, Family and Duties

ಭಾರತೀಯ ಸ್ತ್ರೀ ಧರ್ಮ: ನಾರಿ ಶಕ್ತಿ, ಸಂಸ್ಕೃತಿ, ಕುಟುಂಬ ಮತ್ತು ಕರ್ತವ್ಯಗಳ ಸಂಪೂರ್ಣ ಮಾಹಿತಿ

Spread the love

ಭಾರತೀಯ ಸ್ತ್ರೀ ಧರ್ಮ

ಭಾರತೀಯ ಸಮಾಜದಲ್ಲಿ ಸ್ತ್ರೀ ಒಂದು ವಿಶಿಷ್ಟ ಪೂರ್ಣ ಗೌರವಾನ್ವಿತ ಸ್ಥಾನವನ್ನು ಪಡೆದಿದ್ದಾಳೆ. ಆರ್ಯ ಪುರುಷ ಅವ ಳನ್ನು ಸದಾ ತನ್ನ ಅರ್ಧಾಂಗಿಯಾಗಿ ಒಪ್ಪಿದ್ದಾನೆ. ಇಷ್ಟೇ ಅಲ್ಲ, ವ್ಯವಹಾರಗಳಲ್ಲಿ ಪುರುಷನ ಮರ್ಯಾದೆಗಿಂತ (ಗೌರವ) ಸ್ತ್ರೀಯ ಗೌರವ ಘನತೆಗಳು ಉತ್ಕೃಷ್ಟವಾದುದೆಂದು ತಿಳಿಯಲ್ಪಟ್ಟಿದೆ. ಹಿಂದೂ ಸಂಸ್ಕೃತಿ ಈ ಭಾವನೆಯಿಂದ ಪರಿಪೂರ್ಣವಾಗಿದೆ.

ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ ಯತಾಸ್ತು ನ ಪೂಜ್ಯಂತೇ ಸರ್ವಾಸ್ತತ್ರಾಫಲಾಃ ಕ್ರಿಯಾಃ।

ಆರ್ಯ ಸಂಸ್ಕೃತಿಯಲ್ಲಿ ಸ್ತ್ರೀ ಸಮೂಹದ ಬಗ್ಗೆ ಕೇವಲ ಶಾಬ್ಲಿಕ ಸದ್ಭಾವನೆಯ ಪ್ರದರ್ಶನವಷ್ಟೇ ಅಲ್ಲ. ಭಾರತೀಯ ಗೃಹಸ್ಥ ಜೀವನದಲ್ಲಿ ಆಗಾಗ್ಗೆ ಇದರ ವ್ಯಾವಹಾರಿಕ ಸಾರ್ಥಕತೆ ಸಿದ್ದಿತವಾಗಿದೆ. ಭೌತಿಕವಾದಿ ಪಾಶ್ಚಾತ್ಯ ಮನೋಭಾವದ ಬುದ್ಧಿ ವಂತರಿಗೆ ಇದರಲ್ಲಿ ಯಾವುದೇ ತಥ್ಯ ಕಾಣದಿರಬಹುದು. ಸ್ತ್ರೀಯ ಗೌರವ ರಕ್ಷಣೆಯೊಂದಿಗೆ ದೈವೀ ಪ್ರಸನ್ನತೆಯ ಸಂಗತಿ ಪಾಪ ಅವರ ಬುದ್ದಿಗೆ ನಿಲುಕಲಾರದು. ಆದರೆ ಸ್ಕೂಲ ಜಗತ್ತಿನ ಸೂಕ್ಷ್ಮ ದೈವೀ ಜಗತ್ತಿನೊಂದಿಗಿನ ಸಂಬಂಧ ಮತ್ತು ಅದರ ರಹಸ್ಯ ತಿಳಿದವರಿಗೆ ಹಾಗೂ ಭಾರತೀಯ ಸಾಮಾಜಿಕ ವ್ಯವಸ್ಥೆಯ ವಿಶೇಷವಾಗಿ ಧರ್ಮ ಮರ್ಮಜ್ಞರ ಬಳಿ ಇದರ ಗುಟ್ಟು ವೃತ್ತಿ ಲಕ್ತ ವಾಗಿಲ್ಲ. ಹಾಗಾಗಿ ಹಿಂದೂ ಜೀವನದಲ್ಲಿ ಸ್ತ್ರೀಯ ಗೌರವ ಸದಾ ಎಲ್ಲೆಲ್ಲೂ ಸುರಕ್ಷಿತವಾಗಿಡುವತ್ತ ವಿಶೇಷ ಗಮನ ಕೊಡಲಾಗು ತ್ತದೆ. ಧರ್ಮಶಾಸ್ತ್ರದಲ್ಲಿ ಇದಕ್ಕೆ ಸ್ಪಷ್ಟ ಆದೇಶವನ್ನೇ ಕಾಣುತ್ತೇವೆ.

ಪಿತಾ ರಕ್ಷತಿ ಕೌಮಾರೇ ಭರ್ತಾ ರಕ್ಷತಿ ಯೌವನೇ। ರಕ್ಷಂತಿ ಸ್ಥವಿರೇ ಪುತ್ರಾ ನ ಸ್ತ್ರೀ ಸ್ವಾತಂತ್ರ್ಯಮರ್ಹತಿ ॥

ಧರ್ಮಶಾಸ್ತ್ರದ ಮೂಲಕ ಈ ಮಂಗಳಮಯ ಸ್ತ್ರೀ-ಸ್ವಾತಂತ್ರ್ಯದ ಅಪಹರಣವಾಗಿಲ್ಲ. ಸ್ತ್ರೀಗೆ ನಿರ್ಬಂದ ರೂಪವಾಗಿ ತನ್ನ ಸ್ವಧರ್ಮಪಾಲನೆ ಮಾಡಲು, ಬಾಹ್ಯ ಆಪತ್ತುಗಳಿಂದ ತನ್ನ ರಕ್ಷಣೆಗಾಗಿ ಪುರುಷ ಸಮಾಜದ ಮೇಲೆ ಈ ಹೊಣೆಯನ್ನು ಹೊರಿ ಸಿದೆ. ಧರ್ಮಿಷ್ಟನಾದ ಪುರುಷ ಇದನ್ನು ಹೊರೆಯೆಂದು ತಿಳಿದಿಲ್ಲ. ಧರ್ಮರೂಪದಲ್ಲಿ ಸ್ವೀಕರಿಸಿ ತನ್ನ ಒಳಿತಿಗಾಗಿನ ಕರ್ತವ್ಯವೆಂದು ಭಾವಿಸಿದ್ದಾನೆ ಇದರಂತೆಯೇ :-

ಸ್ವಧರ್ಮೋ ನಿಧನಂ ಶ್ರೇಯಃ ಪರಧರ್ಮೋ ಭಯಾವಹಃ

ಈ ಭಗವದ್ವಾಕ್ಯದ ಮೇಲೆ ನಂಬಿಕೆ ಹೊಂದಿರುವ ಧರ್ಮಾಭಿಮಾನಿನಿಯಾದ ಭಾರತೀಯ ನಾರಿ, ಧರ್ಮಶಾಸ್ತ್ರದ ಈ ವ್ಯವಸ್ಥೆಯನ್ನು ತನ್ನ ಸ್ವಾತಂತ್ರ್ಯದ ಅಪಹರಣವೆಂದಾಗಲೀ ಅಥವಾ ತನ್ನ ಶ್ರೇಯಸ್ಸಿಗೆ ಭಾದಕವೆಂದಾಗಲೀ ಎಂದೂ ತಿಳಿ ದಿಲ್ಲ. ಬದಲಾಗಿ ಈ ಗೌರವದಿಂದಲೇ ಲೋಕ ಪರಲೋಕಗಳನ್ನು ಬೆಳಗುವ ಸತೀತ್ವ ಧರ್ಮವನ್ನು ದೃಢತೆಯಿಂದ ಅನುಸರಿಸುತ್ತಾ ವ್ಯವಹಾರದಲ್ಲಿ ಸ್ತ್ರೀ ಧರ್ಮದ ಆದರ್ಶ ಹಾಗೂ ಪರಮಾರ್ಥದಲ್ಲಿ ಪರಮ ಕಲ್ಯಾಣವನ್ನು ಗಳಿಸಿದ್ದಾಳೆ. ಸ್ತ್ರೀ ಧರ್ಮವನ್ನು ನಿರ್ದೇ ಶಿಸುತ್ತಾ ಧರ್ಮಶಾಸ್ತ್ರ ಹೇಳುವುದು.

ನಾಸ್ತಿ ಸ್ತ್ರೀಣಾಂ ಪೃಥಗ್ಯಜೋ ನ ವ್ರತಂ ನಾಪ್ರಪೋಷಿತಮ್ । ಪತಿಂ ಶುಕ್ರೂಷತೇ ಯೇನ ತೇನ ಸ್ವರ್ಗೆ ಮಹೀಯತೇ।।

ಧರ್ಮಶಾಸ್ತ್ರದ ಈ ಆದೇಶ ವಿಶೇಷ ಮಹತ್ವವನ್ನು ಹೊಂದಿದೆಯಲ್ಲದೆ ಸಾರಗರ್ಭಿತವಾಗಿದೆ. ಇದರಲ್ಲಿ ಸ್ತ್ರೀಯ ಪ್ರಧಾನ ಧರ್ಮದ ಪಾತಿವ್ರತ್ಯದ ರಹಸ್ಯವೇ ಅಡಗಿದೆ. ಸ್ತ್ರೀ ಸದಾ ಪುರುಷನ ಸೇವಕಳಾಗಿ ಇರಬೇಕೆಂಬ ಭಾವನೆಯಂತೂ ಎಂದೆಂದಿಗೂ ಇಲ್ಲ. ಸ್ತ್ರೀಯ ಬದುಕನ್ನು (ಆದಿಭೌತಿಕ, ಆದಿ ದೈವಿಕ ಹಾಗೂ ಆಧ್ಯಾತ್ಮಿಕ ) ಮೂರು ವಿಧದ ಉನ್ನತಿಯ ಪದವಿ ಯಲ್ಲಿ ಪ್ರತಿಷ್ಠಾಪಿಸಲು ಗುರಿಹೊಂದಿದೆಯೇ ಈ ತೆರನ ಪಾತಿ ವ್ರತ್ಯ ಧರ್ಮದ ವಿಧಾನವನ್ನು ಹೇಳಿದೆ. ಇಂತಹ ಸ್ತ್ರೀಯ ಪ್ರಮುಖ ಸಮಯವೆಲ್ಲಾ ಪತಿಯ ಸೇವೆ ಶುಕ್ರೂಷೆ ಇತ್ಯಾದಿ ವಿಷಯ ಗಳ ಲ್ಲಿಯೇ ಕಳೆದು ಹೋಗುತ್ತದೆ. ಹಾಗಾಗಿ ಸಹಜವಾಗಿ ಅವಳ ಭಾವನೆಗಳೆಲ್ಲಾ ಪತಿ ಪ್ರಧಾನವಾಗಿಯೇ ಇರುತ್ತವೆ. ಈ ರೀತಿ ಭಾವನೆಗಳನ್ನು ಹೊಂದಿದಾಕೆ ಅಂತ್ಯದಲ್ಲಿಯೇ ಸಹಜವಾಗಿ ಪತಿಯ ಚಿಂತನೆಯಲ್ಲಿಯೇ ತಾನೂ ಕಾಲ ಸವೆಸುತ್ತಾಳೆ.

ಗೀತೆಯಲ್ಲಿ :-

ಯಂ ಯಂ ವಾಪಿ ಸ್ಮರನ್ ಭಾವಂ ತ್ಯಜತ್ಯಂತೇ ಕಲೇ ವರಮ್ ತಂ ತಮೇಮೈತಿ ಕೌಂತೇಯ ಸದಾ ತದ್ಭಾವ ಭಾವಿತಃ।

ಈ ಸಿದ್ಧಾಂತಾನುಸಾರ ಆಕೆ ಸ್ತ್ರೀ ಜನ್ಮದಿಂದ ಮುಕ್ತಳಾಗಿ ಪುರುಷ ಜನ್ಮವನ್ನು ಹೊಂದುತ್ತಾಳೆ. ಪೂರ್ವಾರ್ಜಿತವಾದ ಧರ್ಮನಿಷ್ಠೆಯ ಪ್ರಭಾವದಿಂದಲೇ ಪುರುಷ ಜನ್ಮದಲ್ಲಿ ಧರ್ಮ ನಿಷ್ಠೆ ಹಾಗೂ ಭಗವತ್ಪರಾಯಣಳಾಗಿ ಕೊನೆಗೆ ಮೋಕ್ಷವನ್ನು ಹೊಂದುತ್ತಾಳೆ. ಇಷ್ಟೇ ಅಲ್ಲ, ಪತಿಯಲ್ಲಿ ದೈವ ಬುದ್ಧಿಯನ್ನು ಇಟ್ಟಿ ರುವ ಪತಿವ್ರತಾ ಸ್ತ್ರೀ ಪತಿರೂಪದಲ್ಲಿಯೇ ಸದಾ ಭಗವಂತನನ್ನು ಪೂಜಿಸುತ್ತಾ (ಸ್ಮರಣೆ) ಅಂತ್ಯದಲ್ಲಿಯೂ ಸದ್ಗತಿಯನ್ನು ಹೊಂದು ತಾಳೆ. ಪಾತಿವ್ರತ್ಯ ಪಾಲನೆಯ ಅಕ್ಷಯ ಮಹಿಮೆ ಶಾಸ್ತ್ರಗಳಲ್ಲಿ ಹೇಳಲ್ಪಟ್ಟಿದೆ. ಅದು ರೋಚನಾರ್ಥಾ ಫಲಶ್ರುತಿಃ ಅಲ್ಲ, ಅಕ್ಷರಶಃ ಸತ್ಯ,ಪಾತಿವ್ರತ್ಯದ ಪ್ರಭಾವದಿಂದ ಸ್ತ್ರೀಯ ಅಂತಃಕರಣದ ಲ್ಲಿಯೇ ಅಪರಿಮಿತ ಸತ್ತ್ವ ಗುಣವೃದ್ಧಿಯಾಗುತ್ತದೆ.

“ಸಾತ್ ಸಂಜಾಯತೇ ಜ್ಞಾನಮ್” ಇದರ ಆಧಾರ ದಂತೆ ಅವಳಿಗೆ ಜ್ಞಾನ ಪ್ರಾಪ್ತಿಯ ಸಂಭಾವ್ಯತೆಯೂ ಸಹ ಇದೆ. ಮೈತ್ರೇಯಿ ಮುಂತಾದವರ ಉದಾಹರಣೆಯೂ ಸಹ ಇದೆ. ಪಾತಿ ವ್ರತ್ಯದ ಇಂತಹ ಪೂರ್ಣನಿಷ್ಠೆಯನ್ನು ಹೊಂದಿದಾಗ ಸ್ತ್ರೀ ಗೆ ಜೀವ ವಿಕಾಸದ ಪೂರ್ಣತೆ ಅಂದರೆ ಕೈವಲ್ಯ ಪದ ಮೋಕ್ಷವನ್ನು ಹೊಂದಲು ಜೀವಕ್ರಮೋನ್ನತಿಯ ಸಹಜ ಕಕ್ಷೆಗಳನ್ನು ಹೊಂದುವ ಕ್ರಮವಾಗಿ ದಾಟುವ ಪುರುಷ ಜನ್ಮವನ್ನು ಪಡೆಯುವ ಅವಶ್ಯ ಕತೆಯೇ ಬರುವುದಿಲ್ಲ. ನಿಷ್ಠೆಯಿಂದ ಈ ಆಧ್ಯಾತ್ಮಿಕ ಲಾಭವನ್ನು ಪಾತಿವ್ರತ್ಯ ಧರ್ಮಾನುಸರಣೆಯಿಂದ ಪಡೆಯಬಹುದು.

ಅನೇಕ ಕಷ್ಟ ವ್ಯಸನಗಳನ್ನು ದಾಟಿ ಜೀವ ಮುಕ್ತವಾಗಲು ಧರ್ಮಶಾಸ್ತ್ರದಲ್ಲಿ ಸ್ತ್ರೀಗೆ ಪಾತಿವ್ರತ್ಯ ಧರ್ಮವನ್ನು ಹೇಳಿದೆ. ಪಾತಿವ್ರತ್ಯ ಧರ್ಮವನ್ನು ಅನುಸರಿಸದ ಸ್ತ್ರೀಯ ಬದುಕು ಕಾಮ, ವಾಸನೆ ಇತ್ಯಾದಿ ವ್ಯಸನಗಳಿಂದ ನೊಂದು ಅಂತ್ಯವೂ ದುಃಖ ಕರವಾಗುತ್ತದೆ. ಬದುಕಿರುವಾಗ ಪ್ರಧಾನವಾಗಿರುವ ಭಾವವೇ ಕೊನೆಗೂ ಭಾದಿಸುತ್ತದೆ. ಇದರ ಮೇಲೆಯೇ ಆಕೆಯ ಭವಿಷ್ಯದ ಗತಿ ನಿರ್ಣಯವಾಗುತ್ತದೆ. ತನ್ನ ಪಾತಿವ್ರತ್ಯ ಧರ್ಮದಿಂದ ಚ್ಯುತಿ ಯಾಗದಂತೆ ನಡೆದು ಕೊಂಡಿದ್ದಾದರೆ ಮರುಜನ್ಮಗಳಲ್ಲಿಯೂ ನಿಕೃಷ್ಟತೆಯನ್ನು ಹೊಂದದೆ ಉತ್ತಮ ಜನ್ಮ ಹೊಂದಲು ಅನು ವಾಗುತ್ತದೆ. ತಾನು ಒಳ್ಳೆಯ ಧರ್ಮಾನುಸಾರಳಾಗಿದ್ದರೆ ಸಹಜವಾಗಿ ಸಿದ್ದಿಗಳ ರೂಪದಲ್ಲಿ ದೈವೀ ಶಕ್ತಿಯನ್ನು ಹೊಂದುತ್ತಾಳೆ. ಇದು ಪಾತಿವ್ರತ್ಯ ಧರ್ಮಪಾಲನೆಯ ಆದಿದೈವಿಕ ಲಾಭ. ಪುರುಷ ಶರೀರದಲ್ಲಿನ ಅಲೌಕಿಕ ಶಕ್ತಿಗಳಾದ ಯೋಗ, ತಪಸ್ಸು ಮುಂತಾ ದವುಗಳು ಕಷ್ಟಕರ ಪ್ರಯತ್ನ, ಉಪಾಯಗಳಿಂದ ಗಳಿಸಲ್ಪಟ್ಟಿರು ತ್ತವೆ. ಆದರೆ ಸ್ತ್ರೀಯಾದವಳು ಪಾತಿವ್ರತ್ಯ ಪಾಲನೆಯಿಂದ ಅನಾ ಯಾಸವಾಗಿಯೇ ಇವುಗಳನ್ನು ಹೊಂದುತ್ತಾಳೆ. ರಾಮಾಯಣ, ಮಹಾಭಾರತ ಮುಂತಾದ ಭಾರತದ ಐತಿಹಾಸಿಕ ಗ್ರಂಥಗಳು ಮತ್ತು ಪುರಾಣಗಳಲ್ಲಿ ಪಾತಿವ್ರತ್ಯದ ಪ್ರಭಾವದಿಂದ ತ್ರಿಕಾಲ ದರ್ಶಿನಿ ಸಿದ್ಧಿಯನ್ನು ಗಳಿಸಿದ ಅನೇಕ ಸ್ತ್ರೀಯರ ಉದಾಹರಣೆ ಗಳು ಲಭ್ಯವಾಗುತ್ತವೆ.

ಇದೇ ಭಾರತ ಭೂಮಿ ಇದೇ ಸ್ತ್ರೀಪರಂಪರೆ, ಭಾರತೀಯ ರಮಣೆ ತನ್ನ ಸತೀತ್ವ ಧರ್ಮವನ್ನು ಯಥಾವತ್ ಪಾಲಿಸಿ ಇಂದಿಗೂ ಅದೇ ಅಸಾಧಾರಣ ದೈವೀ ಶಕ್ತಿಗಳನ್ನು ಪಡೆಯ ಬಲ್ಲಳು. ಇದರಲ್ಲಿ ಅನುಮಾನವೇ ಇಲ್ಲ.

ಪಾತಿವ್ರತ್ಯದ ಆದಿಭೌತಿಕ ಲಾಭವೆಂದರೆ ಪೂರ್ಣ ಸುಖ ಮಯ ಗಾರ್ಹಸ್ಥ ಜೀವನ, ಉತ್ತಮ ಮೇಧಾವೀ ಧರ್ಮನಿಷ್ಠ ಸಂತಾನ ಮುಂತಾದ ನೂರಾರು ರೂಪಗಳಿಂದ ಸ್ಪಷ್ಟ ಅನು ಭವವನ್ನು ಹೊಂದುವುದು. ಸ್ತ್ರೀಧರ್ಮದ ಪೂರ್ಣವರ್ಣನೆ ಹಾಗೂ ರಹಸೋದ್ಘಾಟನೆ ಮಾಡಲು ಬಹಳಷ್ಟು ಬರೆಯಬೇಕಾಗ ಬಹುದು. ದೊಡ್ಡ ಗ್ರಂಥಗಳನ್ನು ಬರೆದರೂ ಸಹ ಅದರ ತತ್ವದ ಸಂಪೂರ್ಣ ವಿಶ್ಲೇಷಣೆ ಮಾಡಲಾಗುತ್ತದೋ ಇಲ್ಲವೋ ಅನು ಮಾನ. ಏಕೆಂದರೆ ಧರ್ಮಶಾಸ್ತ್ರದ ಪ್ರತಿಯೊಂದು ವಿಷಯವನ್ನು ಅತ್ಯಂತ ನಿಗೂಢವಾಗಿ ಹಾಗೂ ಬಹಳ ದೂರ ಪ್ರಭಾವ ಬೀರುವ ವೈಜ್ಞಾನಿಕ ರಹಸ್ಯಗಳಿಂದ ಪರಿಪೂರ್ಣವಾಗಿ ಚರ್ಚಿಸಿದೆ. ಇದರ ನಿಯಮಗಳ ಸೂಕ್ಷ್ಮತೆ ಹಾಗೂ ಪರಸ್ಪರ ಸಂಬಂಧ ಎಷ್ಟಿದೆ ಯೆಂದರೆ, ಒಂದರಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಇಡೀ ವ್ಯವಸ್ಥೆಯ ಮೇಲೆ ಪ್ರಭಾವವಾಗದಿರುವುದಿಲ್ಲ. ಭಾರತೀಯ ಸಮಾಜ ವ್ಯವಸ್ಥೆ, ಅರ್ಥವ್ಯವಸ್ಥೆ, ಆಡಳಿತ ವ್ಯವಸ್ಥೆ ಹಾಗೂ ಧಾರ್ಮಿಕ ವ್ಯವಸ್ಥೆ ಬಹಳ ಗ್ರಂಥಿತವಾಗಿದೆ. ಅವುಗಳ ಸ್ವರೂಪ ವಿಕೃತ ವಾಗಿದರೆ ವಸ್ತುತಃ ಸಾರ್ಥಕ್ಯಗೊಳ್ಳುವುದಿಲ್ಲ.

ಧರ್ಮಶಾಸ್ತ್ರದ ನಿಯಮಗಳು ಜೀವನದ ಜನ್ಮ ಜನ್ಮಾಂತ ರದ ಅಭ್ಯುದಯ ಹಾಗೂ ನಿಃಶ್ರೇಯಸ್ಸಿನೊಂದಿಗೆ ಸಂಬಂಧ ಹೊಂದಿವೆ. ಆಗಾಗ್ಗೆ ಜೀವಿಯ ಸಹಜವಾದ ಆಸೆ ಆಕಾಂಕ್ಷೆಗಳ ಔನ್ನತ್ಯಕ್ಕೆ ಸಹಾಯಕಗಳಾಗಿವೆ. ಧರ್ಮ ತತ್ವಗಳನ್ನು ದಾಟಿ ಹೋಗುವುದು ನಿಜಕ್ಕೂ ಕಷ್ಟತರವೇ. ಆದ್ದರಿಂದಲೇ-ಧರ್ಮಾ ಸೃತತ್ವಾನಿಹಿತಂ ಗುಹಾಯಾಮ್ ಎಂದು ಹೇಳಿರುವುದು. ಧರ್ಮದ ರಹಸ್ಯವನ್ನು ತೋಡಿಸುವುದು ಅಸಾಧಾರಣ ವಿಷಯ. ಇದು ಸಮಾಧಿಗಮ್ಯವಾದದು. ಆದ್ದರಿಂದಲೇ ಧರ್ಮಶಾಸ್ತ್ರದಲ್ಲಿ ನಿಯಮಪಾಲನೆಗಳ ಮೇಲೆಯೇ ಹೆಚ್ಚು ಒತ್ತು ನೀಡಿ ರುವುದು. ಸಾಮಾನ್ಯ ಮನುಷ್ಯನ ಬುದ್ದಿ, ಧಾರ್ಮಿಕ ನಿಯಮಗಳ ರಹಸ್ಯಗಳನ್ನು ಬೋಧಿಸುವ ಪ್ರಯತ್ನದಲ್ಲಿ ತತ್ವದವರೆಗೂ ಹೋಗ ಲಾಗುವುದಿಲ್ಲ. ಅಲ್ಪಸ್ವಲ್ಪ ತಿಳಿದು ಖಂಡಿತ ಭ್ರಮೆಗೊಳಗಾಗುತ್ತಾನೆ. ಹಾಗಾಗಿಯೇ ಸಾಮಾನ್ಯವಾಗಿ ಧರ್ಮಶಾಸ್ತ್ರದ ಸಂಬಂಧದಲ್ಲಿ ರಹಸ್ಯ ವನ್ನು ತಿಳಿಯುವ ಮತ್ತು ವಿಕೆ ಬೇಕು ಎನ್ನುವ ಜಗಳಕ್ಕೆ ಬೀಳದೆ ಶ್ರದ್ಧಾ ಭಕ್ತಿಯಿಂದ ಅವುಗಳನ್ನು ನಿಯಮಗಳನ್ನು ಪಾಲಿಸಬೇಕು. ಅದರ ಲ್ಲಿಯೇ ಒಳಿತಿದೆ. ಧರ್ಮಶಾಸ್ತ್ರದನ್ವಯ ತಮ್ಮ ಜೀವನವನ್ನು ಹೆಚ್ಚು ಅನುಸರಿಸಿಕೊಂಡಷ್ಟು ಸೃಷ್ಟಿ ಚಕ್ರದಲ್ಲಿ ಜೀವದ ಕ್ರಮೋನ್ನತಿಯ ಮಾರ್ಗದಿಂದ ಹೆಚ್ಚೆಚ್ಚು ಮುನ್ನುಗ್ಗಲು ಸಾಧ್ಯ.

ಸ್ತ್ರೀ ವರ್ಗಕ್ಕೆಸತೀತ್ವ ಧರ್ಮವೇ ಆಕೆಯ ಎಲ್ಲ ರೀತಿಯ ಒಳಿತಿಗೆ ವಿಕ ಮಾತ್ರ ಉಪಾಯ. ವರ್ತಮಾನ ಭಾರತೀಯ ಸ್ತ್ರೀ ಒಂದು ವಿಚಾರವನ್ನು ಅವಶ್ಯ ತಿಳಿದುಕೊಳ್ಳಬೇಕು. ಈಗ ಆಕೆಯ ಪರಮ ಕಲ್ಯಾಣಕಾರಿಯಾದ ಸತೀತ್ವಧರ್ಮದ ಮೇಲೆಯೇ ಸಾಮಾಜಿಕ ಹಾಗೂ ರಾಜಕೀಯ ಆಘಾತಗಳು ಆಗುತ್ತಿವೆ. ಸಗೋತ್ರ ವಿವಾಹ, ಅಸವರ್ಣ ವಿವಾಹ, ವಿಧವಾ ವಿವಾಹ ಮುಂತಾದ ಅವಾಂಛನೀಯ ಕಲುಷಿತಗೊಂಡ ಪದ್ಧತಿಯ ಪ್ರವರ್ತಕರು, ವರ್ಣಸಂಕರ ಸೃಷ್ಟು ತ್ಪಾದಕ ಹಾಗೂ ಚೈತ್ರಕ ಶ್ರೀಮಂತಿಕೆಯಲ್ಲಿ ಕನ್ಯಾಧಿಕಾರರು ಮುಂತಾದ ಕುಟುಂಬ ಮತ್ತು ಸಾಮಾಜಿಕ ವಿಧ್ವಂಸಗೊಳಿಸುವವರು ಧರ್ಮಗೌರವ ಮತ್ತು ಅಧರ್ಮಗೌರವದ ವಿರುದ್ಧ ರಾಜಕೀಯ ಕಾನೂನುಗಳನ್ನು ಮಾಡುತ್ತಿದ್ದಾರೆ. ಅವುಗಳನ್ನು ಸಮಾಜ ಸುಧಾರಣೆ, ಸ್ತ್ರೀ ಜಾಗೃತಿ, ಸಮಾನಾಧಿಕಾರ, ಸ್ತ್ರೀ ಸುಬಲೀಕರಣ ಮುಂತಾದ ರೋಚಕ ಹೆಸರುಗಳಿಂದ ಕೂಗುತ್ತಿದ್ದಾರೆ. ಶಾಸ್ತ್ರ ಬುದ್ಧಿಯಿಲ್ಲದ ಪಾಶ್ಚಾ ತ್ಯರನ್ನು ಪ್ರಶಂಸಿಸುವ ಮಂದಿ ಇವುಗಳ ಪ್ರಚಾರಕ್ಕೆ ಕೈಮೀರಿ ಯತ್ನಿ ಸುತ್ತಿದ್ದಾರೆ. ಆದರೆ ಧರ್ಮದ ಮರ್ಮವನ್ನರಿತವರಿಗೆ, ಈ ರೀತಿಯ ಪ್ರಯತ್ನಗಳು ಸಮಾಜ ಹಾಗೂ ರಾಷ್ಟ್ರದ ಉನ್ನತಿಗೆ ಎಂದೂ ಹೇಯ ವಾದುದೆಂದು ತಿಳಿದಿದೆ. ಇದರಿಂದ ಸ್ತ್ರೀಯ ಬದುಕಿನ ಪಾವಿತ್ರ್ಯತೆ ಭ್ರಷ್ಟ ವಾಗಿ ಧರ್ಮಹೀನ, ಉಚ್ಛಂಖಲೆ ಹಾಗೂ ಸತತ ಪತನೋನ್ಮುಖ ಸಮಾಜವನ್ನು ಸೃಷ್ಟಿಸುತ್ತದೆ.

ಈ ಬದುಕಿನ 25-50 ವರ್ಷಗಳಿಗೆ ಕೆಲವು ತೋರಿಕೆಗಳು ಮೇಲೈ ವ್ಯಾವಹಾರಿಕ ಸೌಕಯ್ಯಗಳನ್ನು ಹೊಂದುವ ದುರಾಸೆಯಲ್ಲಿ ಧರ್ಮ ಬಾಹಿರರಾಗಿರುವುದು ಮತ್ತು ಭವಿಷ್ಯದ ಅನೇಕ ಜನ್ಮಗಳ ಉನ್ನತಿಯ ಮಾರ್ಗವನ್ನು ಕಳೆದುಕೊಳ್ಳುವುದು ಔನ್ನತ್ಯ ಮತ್ತು ಬುದ್ಧಿ ವಂತಿಕೆಯಲ್ಲ. ಆದ್ದರಿಂದ ಇದೀಗ, ಸ್ತ್ರೀ ಸಮೂಹವೇ ಜಾಗೃತ ವಾಗಿದ್ದು ತನ್ನ ಒಳಿತಿನ ಧರ್ಮಾವಲಂಬನೆಯನ್ನು ಬಿಡಬಾರದು. ಇಂತಹ ಧರ್ಮ ವಿರುದ್ಧ ರಾಜಕೀಯ ನಿಯಮಗಳನ್ನು ಕಲಿಯುಗದ ಪ್ರವರ್ತಕರು ಅರಿತು ತಿರಸ್ಕಾರ ದೃಷ್ಟಿಯಿಂದ ನೋಡಬೇಕು. ಭಾರತ ಸ್ವತಂತ್ರಗೊಂಡು ಎಪ್ಪತ್ತೆಂಟು ವರ್ಷಗಳಾಗಿವೆ. ಆಡಳಿತ ಸೂತ್ರವು ಹಿಂದೂತತ್ವಾಭಿಮಾನಿ, ಧರ್ಮಾಭಿಮಾನಿ ಗಂಭೀರ ಮಹನೀಯರ ಕೈಸೇರಿರುವುದು ಶುಭದ ಸಂಕೇತ. ಎಲ್ಲ ದುರವಸ್ಥೆಗಳು ದೂರವಾಗಲು ಕೈ ಜೋಡಿಸಿ ಶ್ರಮಿಸಬೇಕು. ಇದು ಎಲ್ಲರ ಜಾಗ್ರತೆ ಮತ್ತು ನಿಷ್ಠೆಯನ್ನು ಅವಲಂಬಿಸಿದೆ.

ಸ್ತ್ರೀ ಸಮೂಹದ ಮೇಲೆ ಸೃಷ್ಟಿ ಉತ್ಪಾದನೆಯ ಹೊರೆ ಇದೆ. ಸ್ವತಂತ್ರ ಭಾರತದಲ್ಲಿ ವೀರ, ಸಾಹಸೀ, ಮೇಧಾವೀ, ಪವಿತ್ರ ಹಾಗೂ ಸರ್ವತೋಮುಖ ಅಭಿವೃದ್ಧಿ ಶೀಲ ಸಂತತಿಯ ಸೃಷ್ಟಿಯಾಗಲಿ, ಇದಕ್ಕಾಗಿ ಪ್ರತಿಯೊಬ್ಬ ಭಾರತೀಯ ಸ್ತ್ರೀ ತನ್ನ ವ್ಯಾವಹಾರಿಕ ಬದುಕಿನಲ್ಲಿ ಆಂತರಿಕ ಹಾಗೂ ಬಾಹ್ಯಗಳೆರಡರಲ್ಲೂ ಪಾವಿತ್ರ್ಯತೆಯನ್ನು ಹೊಂದಲು ಸತತ ಎಚ್ಚರಿಕೆ ವಹಿಸಬೇಕು.


ಸ್ವಧರ್ಮ ಪ್ರತಿಪಾದಕಗಳಾದ ರಾಮಾಯಣ, ಮಹಾ ಭಾರತ ಮುಂತಾದ ಧಾರ್ಮಿಕ, ಐತಿಹಾಸಿಕ ಗ್ರಂಥಗಳನ್ನು ಮತ್ತೆ ಓದಬೇಕಲ್ಲದೆ, ಮನನ ಮಾಡಿಕೊಂಡು ಮಕ್ಕಳಲ್ಲಿ ಬಿತ್ತಬೇಕು. ಕೇವಲ ಆಕರ್ಷಕ ಮನರಂಜನೆಗಳಿಗೆ ಈಡಾಗಿ ಬದುಕು ಹಾಳಾಗಬಾರದು. ಮಕ್ಕಳು, ಯುವಕರು ದಾರಿ ತಪ್ಪದಂತೆ ಎಚ್ಚರ, ಸಲಹೆ ನೀಡುತ್ತಿರಬೇಕು. ಸಮ ಯಕ್ಕೆ ಸರಿಯಾಗಿ ಶಾಸ್ತ್ರಾನುಸಾರ ಸಂಸ್ಕಾರಗಳನ್ನು ಮಕ್ಕ ಳಿಗೆ ಮಾಡಬೇಕು. ಎಲ್ಲ ಕುಟುಂಬಗಳಲ್ಲಿ ಸ್ತ್ರೀಯ ಸ್ವಧರ್ಮ ಪಾಲನೆ ಅತಿ ಮಹತ್ವದ್ದು ಎಂಬುದನ್ನು ಪ್ರತಿ ಹಂತದ ಲ್ಲಿಯೂ ತಿಳಿಸಿಕೊಡಬೇಕು. ಸರಿಯಾದ ಶಿಕ್ಷಣದ ಮೂಲಕ ಅವಳನ್ನು ಪೂರ್ಣ ಸತಿ, ಪೂರ್ಣ ಮಾತೆ ಮತ್ತು ಪೂರ್ಣ ಉತ್ತಮ ಗೃಹಿಣಿಯಾಗಿಸಲು ಸರ್ವ ಪ್ರಯತ್ನ ಮಾಡಬೇಕು. ಇದರಿಂದ ಸಮಾಜಕ್ಕೆ ಹಾಗೂ ರಾಷ್ಟ್ರಕ್ಕೆ ಉತ್ತಮ ಕೊಡುಗೆ ಕೊಟ್ಟಂತಾಗುವುದಲ್ಲದೆ ರಾಷ್ಟ್ರದ ಅಭಿ ವೃದ್ಧಿಗೂ ಕೈ ಜೋಡಿಸಿದಂತಾಗುತ್ತದೆ


Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *