ಕೂರ್ಮ ಅವತಾರ
ಕೂರ್ಮಾವತಾರವು ಶ್ರೀಮನ್ನಾರಾಯಣನ ದಶಾ ವತಾರಗಳಲ್ಲಿ ಎರಡನೆಯ ಅವತಾರವಾಗಿದೆ. ಕೃತಯುಗದಲ್ಲಿ ಮತ್ಯ, ಕೂರ್ಮ, ವರಾಹ, ನಾರಸಿಂಹ, ವಾಮನ, ಪರಶು ರಾಮ ಅವತಾರಗಳಾದರೆ ತ್ರೇತಾಯುಗದಲ್ಲಿ ರಾಮ, ದ್ವಾಪರ ದಲ್ಲಿ ಕೃಷ್ಣ ಅವತಾರಗಳಾದರೆ ಕಲಿಯುಗದಲ್ಲಿ ಬೌದ್ಧ ಕಳ್ಳಿ ಅವತಾರಗಳು ಆಗುತ್ತವೆ. ಕೂರ್ಮಾವತಾರವು ವೈವಸ್ವತ ಮನ್ವಂತರದಲ್ಲಿ ಎರಡು ಬಾರಿ ನಡೆದಿದೆ ಎಂದು ಪುರಾಣಗಳು ಹೇಳುತ್ತವೆ. ಮೊದಲನೆಯ ಬಾರಿಗೆ ವೈಶಾಖ ಶುಕ್ಲ/ಕೃಷ್ಣ ದ್ವಿತೀಯಾದಂದು ಆದರೆ ಇನ್ನೊಂದು ಬಾರಿಗೆ ಜೇಷ್ಠ ಶುಕ್ಲ ದ್ವಾದಶಿ ನಡೆದಿದೆ ಎಂದು ಹೇಳುತ್ತಾರೆ.
ಭಗವಂತನ ಪ್ರತಿ ಅವತಾರದ ಹಿಂದೆ ಮುಖ್ಯ ಕಾರಣ “ದುಷ್ಟ ಶಿಕ್ಷಣ ಶಿಷ್ಟ ರಕ್ಷಣೆ” ಆಗಿರುತ್ತದೆ. ದೇವಾಸುರರ ಮಧ್ಯ ಅನಾದಿ ಕಾಲದಿಂದಲೂ ಯುದ್ಧಗಳು ನಡೆಯುತ್ತಲೇ ಇರುತ್ತದೆ. ಕೃತಯುಗದಲ್ಲಿ ಒಮ್ಮೆ ದೂರ್ವಾಸ ಮುನಿಗಳು ದೇವೇಂದ್ರನಿಗೆ ಆಶೀರ್ವಾದ ಪೂರ್ವಕವಾಗಿ ನಿರ್ಮಾಲ್ಯ ಪುಷ್ಪವನ್ನು ನೀಡು ತ್ತಾರೆ. ಆಗ ದೇವೇಂದ್ರನು ಮುನಿಗಳು ಕೊಟ್ಟ ಪುಷ್ಪವನ್ನು ತನ್ನ ಆನೆಯ ಮೇಲೆ ಇಡುತ್ತಾನೆ. ಆನೆಯು ಆ ಪುಷ್ಪವನ್ನು ಕಾಲಿನಿಂದ ಒದೆಯುತ್ತದೆ. ಇದರಿಂದ ಕೋಪಗೊಂಡ ಋಷಿ ಗಳು ದೇವೇಂದ್ರನಿಗೆ ಅಧಿಕಾರ ಹಾಗೂ ಸಂಪತ್ತಿನಿಂದ ವಂಚಿತನಾಗು ಎಂದು ಶಪಿಸುತ್ತಾರೆ. ಅದರಿಂದ ದೇವೇಂದ್ರನು ದೇವಾಸುರ ಸಂಗ್ರಾಮದಲ್ಲಿ ಸೋಲುತ್ತಾನೆ. ಪದೇ ಪದೇ ಅಗುವ ಯುದ್ಧಗಳಿಂದ ಎರಡೂ ಪಕ್ಷಗಳ ಸೈನಿಕರು ಗಾಯಾಳು ಗಳಾಗುವುದು ಸಾಯುವುದನ್ನು ತಪ್ಪಿಸಬೇಕೆಂಬ ಪ್ರಾರ್ಥನೆ ಯೊಂದಿಗೆ ಬೈಕುಂಠಕ್ಕೆ ಹೋದಾಗ ಪರಮಾತ್ಮನು ಅಮೃತ ವನ್ನು ಕುಡಿಯಬೇಕೆಂಬ ಸಲಹೆಯನ್ನು ನೀಡುತ್ತಾನೆ. ಆಗ ದೇವತೆಗಳು ಅಸುರರು ಮಂದರ ಪರ್ವತವನ್ನು ಮಧ್ಯದಲ್ಲಿ ನಿಲ್ಲಿಸಿ ಸಮುದ್ರವನ್ನು ಕಡೆಯಲು ವಾಸುಕಿಯನ್ನು ಹಗ್ಗವ ನ್ನಾಗಿ ಮಾಡಿಕೊಂಡು ಅಮೃತವನ್ನು ಪಡೆಯಲು ಸಮುದ್ರ ಮಂಥನವನ್ನು ಆರಂಭಿಸುತ್ತಾರೆ. ಆದರೆ ಮಂದರ ಪರ್ವತ ಸ್ಥಿರವಾಗಿ ನಿಲ್ಲಲು ಆಗದೇ ಮುಳುಗಲು ಆರಂಭಿಸುತ್ತದೆ. ಆ ಸಂದರ್ಭದಲ್ಲಿ ಎಲ್ಲರೂ ಸೇರಿ ಶ್ರೀಮನ್ನಾರಾಯಣನನ್ನು ಪ್ರಾರ್ಥಿಸಿದಾಗ ದೇವರು ಲೋಕ ಕಲ್ಯಾಣಕ್ಕಾಗಿ ಕೂರ್ಮ ರೂಪವನ್ನು ಧರಿಸಿ ತನ್ನ ಬೆನ್ನಿನ ಮೇಲೆ ಮಂದರ ಪರ್ವತ ವನ್ನು ಹೊತ್ತು ಸಮುದ್ರ ಮಂಥನವನ್ನು ಮಾಡಿ ಅಮೃತವನ್ನು ಪಡೆಯಲು ಸಹಾಯ ಮಾಡುತ್ತಾನೆ. ಕೂರ್ಮಾವತಾರದಲ್ಲಿ ಭಗವಂತನು ನೂರು ಯೋಜನಗಳಷ್ಟು ದೊಡ್ಡದಾದ ಆಕಾರ ದಿಂದ ನಿಂತು ಮಂದರ ಪರ್ವತದ ಭಾರವನ್ನು ಹೊತ್ತು ಭಕ್ತ ರನ್ನು ಉದ್ಧರಿಸುತ್ತಾನೆ.
ಸಮುದ್ರ ಮಂಥನ
ಸಮುದ್ರ ಮಂಥನದಲ್ಲಿ ಅನೇಕ ಪದಾರ್ಥಗಳು ಬಂದವು, ಸಮುದ್ರ ಮಂಥನ ಮಾಡುವಾಗ ವಾಸುಕಿಯ ಬಾಯಿಯಿಂದ ಬರುತ್ತಿದ್ದ ಹಾಲಾಹಲ(ವಿಷ)ವನ್ನು ರುದ್ರ ದೇವರು ಸೇವಿಸಿ ನೀಲಕಂಠ ಎಂದೆನಿಸಿಕೊಂಡರು. ಸಮುದ್ರ ಮಥನದಲ್ಲಿ ಲಕ್ಷ್ಮಿ ದೇವಿಯು ಹುಟ್ಟುತ್ತಾಳೆ. ಅವಳನ್ನು ಶ್ರೀಮನ್ನಾ ರಾಯಣನು ವಿವಾಹವಾಗುತ್ತಾನೆ. ನಂತರ ಅಪ್ಪರಾ ಸ್ತ್ರೀ ಯರು ಮತ್ತು ಗಂಧರ್ವರು ಬರುತ್ತಾರೆ. ವಾರುಣಿ, ಕಾಮ ಧೇನು, ಐರಾವತ, ಉಚೈಶ್ರವ ಹಯ ಇದನ್ನು ಬಲಿ ಚಕ್ರವರ್ತಿ ತೆಗೆದುಕೊಳ್ಳುತ್ತಾನೆ. ಕೌಸ್ತುಭಮಣಿ ಅದನ್ನು ಪರಮಾತ್ಮನಿಗೆ ಕೊಡುತ್ತಾರೆ. ಕಲ್ಪವೃಕ್ಷ ಶಾರಂಗ ಎಂಬ ಜಿಲ್ಲು ಇದನ್ನು ಕೂಡ ಪರಮಾತ್ಯರಿಗೆ ಅರ್ಪಿಸುತ್ತಾರೆ. ಚಂದ್ರ, ಶಂಖವನ್ನು ಪರಮಾತ್ಮ ನಿಗೆ ಕೊಡುತ್ತಾರೆ. ಜೈಷ್ಠಾದೇವಿ ಬರುತ್ತಾಳೆ. ಅಮೂಲ್ಯವಾದ ಕೊಡೆ ಬರುತ್ತದೆ ಅದನ್ನು ವರುಣನು ದೈವಿಕ ಕರಣ ಕುಂಡಲ ಗಳು ಬರುತ್ತವೆ ಅವುಗಳನ್ನು ಅದಿತಿ ದೇವಿಗೆ ಇಂದ್ರನು ಕೊಡು ತಾನೆ. ಕಡೆಯದಾಗಿ ಧನ್ವಂತ್ರಿ ದೇವತೆಗಳ ವೈದ್ಯ ಅಮೃತದ ಕಳಶದೊಂದಿಗೆ ಬರುತ್ತಾನೆ. ಈ ರೀತಿಯಲ್ಲಿ ಕೂರ್ಮಾವತಾರ ವಾಯಿತು. ಪ್ರತಿ ಯುಗದಲ್ಲೂ ಒಂದೊಂದು ವಿಶೇಷ ಅವತಾರ ದಲ್ಲಿ ಅವತರಿಸಿದ ದೇವರ ಅವತಾರಕ್ಕೆ ವಿಶೇಷ ಕಾರಣಗಳಿವೆ. ಅದೇ ರೀತಿ ಪ್ರತಿ ಅವತಾರದಿಂದ ದೇವರು ನಮಗೆ ಒಂದಿಲ್ಲ. ಒಂದು ಸಂದೇಶವನ್ನು ನೀಡಿದ್ದಾನೆ. ಅವತಾರದ ಉದ್ದೇಶ ಮತ್ತು ಸಂದೇಶಗಳನ್ನು ತಿಳಿದು ನಮ್ಮ ಜೀವನವನ್ನು ನಾವು ಹಸನಾಗಿ ಮಾಡಿಕೊಳ್ಳಬೇಕು.
ನಮ್ಮ ಜೀವನವನ್ನು ಸಮುದ್ರಮಂಥನಕ್ಕೂ ನಮ್ಮ ಮನಸ್ಸನ್ನು ಸುರ ಮತ್ತು ಅಸುರರಿಗೂ ಹೋಲಿಸಿಕೊಂಡು ನಾವು ಜೀವನದಲ್ಲಿ ಮುನ್ನಡೆಯಬೇಕು. ನಮ್ಮ ಮನಸ್ಸಿನ ಕೆಟ್ಟ ಭಾವನೆ ಗಳನ್ನು ಅಸುರರಿಗೂ ಯೋಗ್ಯ ವಿಚಾರಗಳನ್ನು ಸುರರಿಗೂ ಹೋಲಿಸಿಕೊಂಡು ಹೋಗಬೇಕು. ನಾವು ಕೆಟ್ಟ ಕರ್ಮ ಮಾಡಿ ದಾಗ ನಮಗೆ ಕೆಟ್ಟ ಫಲಗಳು ಮತ್ತು ಉತ್ತಮ ಕೆಲಸಗಳನ್ನು ಮಾಡಿದಾಗ ಉತ್ತಮ ಫಲಗಳನ್ನು ಭಗವಂತ ನೀಡುತ್ತಾನೆ.
ಇಲ್ಲಿ ಕೂರ್ಮಾವತಾರದಿಂದ ನಾವು ಕಲಿಯಬೇಕಾದ ಅಂಶಗಳು ಬಹಳಷ್ಟು ಇದೆ. ಕೂರ್ಮದ ಗತಿ ನಿಧಾನ ಮತ್ತು ಅದರ ಗಾತ್ರ ದೊಡ್ಡದು. ನಮ್ಮ ಮನಸ್ಸನ್ನು ವಿಶಾಲವಾಗಿದ್ದು ಕೊಂಡು ನಮ್ಮ ದಿನ ನಿತ್ಯದ ಜೀವನದಲ್ಲಿ ಯಾವುದೇ ಕೆಲಸಕ್ಕೆ ಅಥವಾ ನಿರ್ಣಯಕ್ಕೆ ನಿಧಾನವಾಗಿ ಯೋಚಿಸಿ ಮುಂದಿನ ಹೆಜ್ಜೆ ದೊಡ್ಡ ಪಾಠವೆಂದರೆ ಆಮೆಗಳಿಗೆ ರಕ್ಷಾ ಕವಚವು ಮೈ ಮೇಲೆ ಇಡಬೇಕು. ಕೂರ್ಮದಿಂದ ನಾವು ಕಲಿಯಬೇಕಾದ ಮತ್ತೊಂದು ಇರುತ್ತದೆ. ಯಾವುದೇ ಅಪತ್ತು ಬಂದಾಗ ಅದು ತನ್ನ ದೇಹವನ್ನು ಸ್ವಲ್ಪ ಸಣ್ಣದು ಮಾಡಿ ಆ ಕವಚದೊಳಗೆ ಅವಿತು ಕುಳಿತು ಬಿಡು ತ್ತದೆ. ನಾವು ಕೂಡ ನಮ್ಮ ಇಂದ್ರಿಯಗಳ ಮನದ ಸಂಬಂಧಗಳ ಗೊಂದಲದಲ್ಲಿ ಸಿಲುಕಿದಾಗ ಇಂದ್ರಿಯಗಳ ಅಭಿಲಾಷೆಗಳನ್ನು ಒಳಕುಳಿತು ಭಗವಂತನ ಕುರಿತು ಭಜಿಸಬೇಕು. ಭಗವಂತನ ಕೂರ್ಮಾವತಾರದ ಪ್ರಮುಖ ಸಂದೇಶವೆಂದರೆ ಪರಮಾತ್ಮನಿಗೆ ಸಮುದ್ರಮಂಥನದಿಂದ ಅಗಲಿ ಅಮೃತಪಾನದಿಂದ ಅಗಲಿ ಯಾವುದೇ ಪ್ರಯೋಜನವು ಇದ್ದಿಲ್ಲ. ಮನುಕುಲದ ರಕ್ಷಣೆಗೆ ದೇವ ಹಾಗೂ ದೈತ್ಯರ ಯುದ್ಧಗಳಿಂದ ಭೂಮಿಯಲ್ಲಿ ಆಗುತ್ತಿದ್ದ ಹಾನಿಯನ್ನು ತಡೆಗಟ್ಟಲು ಭಕ್ತರ ಪ್ರಾರ್ಥನೆಗೆ ಸ್ಪಂದಿಸಿ ಕೂರ್ಮಾ ವತಾರವನ್ನು ತಳೆಯುತ್ತಾನೆ.
