Yogiraja Datta | 16 Incarnations of Lord Dattatreya in Kannada

Spread the love

ಬ್ರಹ್ಮಪುತ್ರರಾದ ಅತ್ರಿ ಮಹರ್ಷಿ ಸತಿ ಅನಸೂಯೆಯೊಡನೆ ಕೂಡಿ ಹಿಮಾಲಯದಲ್ಲಿ ತಪಸ್ಸನ್ನು ಆಚರಿಸಿದರು. ಅವರ ತಪಸ್ಸಿಗೆ ಮೆಚ್ಚಿ ಭಗವಂತ ಅವರ ಮುಂದೆ ಪ್ರಕಟರಾದರು. ಭಗವಂತ ಸ್ಪಟಿಕದ ಹಾಗೆ ಶುಭ್ರವಾಗಿ ಹೊಳೆಯುತ್ತಿದ್ದರು. ದತ್ತಾತ್ರೇಯರ ಈ ಅವತಾರ ಯೋಗಿರಾಜರೆಂದು ಪ್ರಸಿದ್ಧವಾಗಿದೆ. ಅವರು ಯೋಗಮಾರ್ಗವನ್ನು ಉಪದೇಶಿಸುತ್ತಿದ್ದರು. ಹಾಗಾಗಿ ಅವರ ಹೆಸರು ಯೋಗಿರಾಜ ಎಂದು ಪ್ರಸಿದ್ದಿ ಹೊಂದಿತು.

  • ಅದ್ವಯಾನಂದರೂಪಾಯ | ಯೋಗಮಾಯಾಧರಾಯಚ
  • ಯೋಗಿರಾಜಾಯ ದೇವಾಯ | ಶ್ರೀ ದತ್ತಾತ್ರೇಯಾಯ ನಮೋ ನಮಃ||
  • ಬ್ರಹ್ಮಪುತ್ರರಾದ ಅತ್ರಿ ಮಹರ್ಷಿ ಸತಿ ಅನಸೂಯೆಯೊಡನೆ ಕೂಡಿ ಹಿಮಾಲಯದಲ್ಲಿ ತಪಸ್ಸನ್ನು ಆಚರಿಸಿದರು. ಅವರ ತಪಸ್ಸಿಗೆ ಮೆಚ್ಚಿ ಭಗವಂತ ಅವರ ಮುಂದೆ ಪ್ರಕಟರಾದರು. ಭಗವಂತ ಸ್ಪಟಿಕದ ಹಾಗೆ ಶುಭ್ರವಾಗಿ ಹೊಳೆಯುತ್ತಿದ್ದರು. ದತ್ತಾತ್ರೇಯರ ಈ ಅವತಾರ ಯೋಗಿರಾಜರೆಂದು ಪ್ರಸಿದ್ಧವಾಗಿದೆ. ಅವರು ಯೋಗಮಾರ್ಗವನ್ನು ಉಪದೇಶಿಸುತ್ತಿದ್ದರು. ಹಾಗಾಗಿ ಅವರ ಹೆಸರು ಯೋಗಿರಾಜ ಎಂದು ಪ್ರಸಿದ್ದಿ ಹೊಂದಿತು.
  • ಬ್ರಹ್ಮದೇವರು ಸೃಷ್ಠಿಕರ್ತ, ವಿಶ್ವದಲ್ಲಿ ಜನರಿಗೆ ಪ್ರಾರಬ್ಧದಿಂದ ಉಂಟಾಗುವ ನೋವನ್ನು ನೋಡಿ ಬಹಳವಾಗಿ ಚಿಂತಿತರಾದರು. ಅವರು “ದತ್ತೋಹಂ ದತ್ತೋಹಂ” ಎಂದು ಪ್ರಾರ್ಥಿಸಿದರು. ಸೃಷ್ಠಿಯ ಕಲ್ಯಾಣಕ್ಕಾಗಿ ಶ್ರೀ ನಾರಾಯಣನು ಪ್ರಕಟವಾದರು. ಅವರು ಬ್ರಹ್ಮದೇವರಿಗೆ ಯೋಗ ಮತ್ತು ಆತ್ಮತತ್ವವನ್ನು ಕುರಿತು ಜ್ಞಾನದ ಉಪದೇಶವನ್ನು ಮಾಡಿ ಶಾಂತಿಯನ್ನು ಪ್ರಸಾದಿಸಿದರು. ದತ್ತೋಹಂ ದತ್ತೋಹಂ ಎಂದು ಜಪಿಸುವರಿಗೆ ಬ್ರಹ್ಮದೇವರು ಪಡೆದಂತಹ ಫಲವು ದೊರೆಯುವುದೆಂದು ದತ್ತಾತ್ರೇಯರು ಆಶೀರ್ವದಿಸಿದರು.
  • ಯೋಗಿರಾಜ ಅವತಾರದಲ್ಲಿ ದತ್ತಾತ್ರೇಯರು ಸಂಪೂರ್ಣ ಅಷ್ಟಾಂಗ ಯೋಗವನ್ನು ವಿಸ್ತರಿಸಿದರು ಹಾಗಾಗಿ ಇವರನ್ನು ಯೋಗಿರಾಜ ಎಂದು ಕರೆಯುತ್ತಾರೆ. “ದತ್ತೋಹಂ” ಎಂಬುವ ಮಂತ್ರದ ಅರ್ಥ ನನ್ನನ್ನು ನಾನು ನಿನಗೆ ಅರ್ಪಿಸುತ್ತೇನೆ, ನನ್ನ ಸರ್ವಸ್ವವನ್ನು ನಿನ್ನ ಚರಣಕ್ಕೆ ಅರ್ಪಿಸುವೆನು. ಈ ಸಮರ್ಪಣೆಯ ಭಾವನೆ ಭಕ್ತಿಯಲ್ಲಿ ಬಹಳ ಮಹತ್ವವಾಗಿರುವುದು, ಹಾಗಿದ್ದರೇನೆ ಭಕ್ತನಿಗೆ ಸದ್ಗುರುವಿನ ಕೃಪೆ ಪ್ರಾಪ್ತಿಯಾಗುತ್ತೆ.
  • ಪ್ರಕಟ: ಕಾರ್ತಿಕ ಶುದ್ಧ ಹುಣ್ಣಮೆ, ಕೃತಿಕಾ ನಕ್ಷತ್ರ, ಬುಧವಾರ, ಸೂರ್ಯೋದಯದ ಮೊದಲನೆ ಪ್ರಹರದಲ್ಲಿ.


Spread the love

Leave a Comment

error: Content is protected !!