Neene Nanna Guruvu lyrics – ನೀನೆ ನನ್ನ ಗುರುವೂ

Spread the love

ನೀನೆ ನನ್ನ ಗುರುವು | ನೀನೆ ನನ್ನ ಇರುವು |

ನೀನೆ ನನ್ನ ದೈವವು | ನೀನೆ ನನ್ನ ಜೀವವು | ಪ |

ನೀನೆ ನನ್ನ ಮಾತಾ | ನೀನೆ ನನ್ನ ದಾತಾ |

ನೀನೆ ಬಂಧು ಬಳಗ | ನೀನೇ ಎಲ್ಲವೂ || 1 ||

ನೀನೆ ನನ್ನ ಜ್ಯೋತಿ | ನೀನೆ ನನ್ನ ಆರತಿ |

ನೀನೆ ನನ್ನ ಕೀರುತಿ | ನೀನೇ ನನ್ನ ಸಾರಥಿ || 2 ||

ಮುಂದೆ ದಾರಿ ತೋರದಯ್ಯ | ಎಲ್ಲೆಲ್ಲೂ ಕತ್ತಲಯ್ಯ |

ಬೆಳಕು ತೋರಿ ಎನ್ನನ್ನು ಮುನ್ನಡೆಸು ಬಾರಯ್ಯ || 3 ||

ಮುಕ್ತಿ ಬೇಡಿ ಬಂದೆ | ಕೃಪೆಯ ಕೋರಿ ನಿಂದೆ |

ನಿನ್ನ ಹರಕೆ ಒಂದೆ ಸಾಕೆನಗೆ ತಂದೆ || 4 ||

ಎಲ್ಲೆಲ್ಲೂ ನೀ ತುಂಬಿರುವೆ | ನನ್ನಲ್ಲೂ ನೀನಿರುವೆ |

ತನಗೆ ತಾನಾಗಿರುವೆ ಓ ಘನಗುರುವೆ || 5 ||

ನಿನ್ನ ಹರಕೆ ನನಗೆ ರಕ್ಷೆ ನಿನ್ನ ನಾಮವೆ ದೀಕ್ಷೆ |

ನಿನ್ನ ದಾರಿ ನನಗೆ ನಕ್ಷೆ ಮತ್ತೆ ಭವಕೆ ಬರುವುದೆ ಶಿಕ್ಷೆ || 6 ||

ನಿನ್ನ ಅನುಗ್ರಹವಿರದೆ ನಾ ಉಸಿರಾಡಲಾರೆ |

ನಿನ್ನ ಆಶೀರ್ವಾದವಿರದೆ ಮುನ್ನಡೆಯಲಾರೆ || 7 ||

ಜಪವು ಎನಗೆ ಗೊತ್ತಿಲ್ಲ | ತಪವು ಎನಗೆ ಬರುವುದಿಲ್ಲ |

ನೀ ಕೈಯ ಬಿಟ್ಟರೆ ಎನ್ನ ಕಾಯುವರಿಲ್ಲ || 8 ||

ಈ ಭವ ಶೂನ್ಯ ನೀ ಮಾಡು ಧನ್ನ |

ನಿನ್ನ ಕೃಪೆಯು ಎನ್ನ ಮೇಲೆ ಇರಲಿ ಅನನ್ಯ || 9 ||

ಜಗತ್ತಿಗೆ ನೀನು ತಂದೆ | ಎಲ್ಲ ಮಕ್ಕಳು ನಿನಗೂಂದೆ |

ಕೃಪೆಯ ಕೋರಿ ಬಂದೆ | ಮುಕ್ತಿ ನೀಡು ಇಂದೆ || 10 ||

ಕಡುಪಾಪಿ ನಾನಯ್ಯ | ಸರ್ವಶಕ್ತ ನೀನಯ್ಯ |

ದಾರಿ ತೋರು ಕನ್ನಯ್ಯ | ಶ್ರೀ ಗುರುವೆ ಮಲ್ಲಯ್ಯ || 11 ||

English Text in Kannada

Nīne nanna guruvu | nīne nanna iruvu |

nīne nanna daivavu | nīne nanna jīvavu | pa |

nīne nanna mātā | nīne nanna dātā |

nīne bandhu baḷaga | nīnē ellavū || 1 ||

nīne nanna jyōti | nīne nanna ārati ||

nīne nanna kīruti | nīnē nanna sārathi || 2 ||

munde dāri tōradayya | ellellū kattalayya |

beḷaku tōri ennannu munnaḍesu bārayya || 3 ||

mukti bēḍi bande | kr̥peya kōri ninde |

ninna harake onde sākenage tande || 4 ||

ellellū nī tumbiruve | nannallū nīniruve |

tanage tānāgiruve ō ghanaguruve || 5 ||

ninna harake nanage rakṣe ninna nāmave dīkṣe |

ninna dāri nanage nakṣe matte bhavake baruvude śikṣe || 6 ||

ninna anugrahavirade nā usirāḍalāre |

ninna āśīrvādavirade munnaḍeyalāre || 7 ||

japavu enage gottilla | tapavu enage baruvudilla |

nī kaiya biṭṭare enna kāyuvarilla || 8 ||

ī bhava śūn’ya nī māḍu dhanna |

ninna kr̥peyu enna mēle irali anan’ya || 9 ||

jagattige nīnu tande | ella makkaḷu ninagūnde ||

kr̥peya kōri bande | mukti nīḍu inde || 10 ||

kaḍupāpi nānayya | sarvaśakta nīnayya |

dāri tōru kannayya | śrī guruve mallayya || 11 ||

English

You are my Guru | You are my Being |

You are my God | You are my Life | P |

You are my Mother | You are my Giver |

You are my kinship | You are everything || 1 ||

You are my light | You are my worship |

You are my fame | You are my charioteer || 2 ||

Do not show me the way ahead | Everywhere is darkness |

Show me the light and lead me || 3 ||

I have come seeking liberation | Seeking grace |

Your vow alone is enough for me, Father || 4 ||

You are everywhere | You are in me too |

You are your own self, O great Guru || 5 ||

Your vow is my protection, Your name is my initiation |

Your path is my map, My life is my punishment || 6 ||

Without your grace I cannot breathe |

Without your blessings I cannot move forward || 7 ||

I do not know how to chant | I do not know how to do penance |

If you leave my hand, I will not wait || 8 ||

This world is empty, you make me happy |

May your grace be on me, unique || 9 ||

You are the father of the world | All children belong to you |

I have come seeking your grace | Give me salvation today || 10 ||

I am a sinner | You are the Almighty |

Show me the way, Kanya | Sri Guru Mallaya || 11 ||


Spread the love

Leave a Comment

error: Content is protected !!