Mealtime lessons taught by elders – ಹಿರಿಯರು ಹೇಳಿಕೊಟ್ಟ ಊಟದ ಪಾಠ

Spread the love

Mealtime lessons taught by elders – ಹಿರಿಯರು ಹೇಳಿಕೊಟ್ಟ ಊಟದ ಪಾಠ.



1. ಕಾರೆ ಸೊಪ್ಪನ್ನು ತಿಂದರೂ ಕಾಯಕದಿಂದಲೇ ಗಳಿಸಿರಬೇಕು.

2. ಊಟಕ್ಕೆ ಕುಳಿತುಕೊಳ್ಳುವ ಮೊದಲು ಕುಳಿತುಕೊಳ್ಳುವ ಶುಚಿಯಾಗಿರಬೇಕು..

3. ಬಾಯಿ ಮುಕ್ಕಳಿಸಿ ಶುಚಿಯಾಗಿ ಕೈತೊಳೆದುಕೊಳ್ಳಬೇಕು …

4. ಗುರುನಾಮ ಸ್ಮರಣೆ ಮಾಡಿ ನೆಲದ మరియ ಕುಳಿತುಕೊಳ್ಳಬೇಕು.

5. ಊಟಕ್ಕೆ ಕುಳಿತಾಗ ನೆತ್ತಿಯ ಮೇಲೆ ಪೇಟ- ಪಟಗಾ ಸುತ್ತಿರುವುದಾಗಲೀ, ಇರಬಾರದು.

6. ಕರವಸ್ತ್ರವಾಗಲೀ, ಒಲ್ಲಿ ಟವಲ್ ಆಗಲಿ ನಿನ್ನ ಜೊತೆಗಿರಬೇಕು

7. ಊಟದೆಲೆ or ತಟ್ಟೆ ಈಗಾಗಲೇ ಶುಚಿಯಾಗಿಟ್ಟಿದ್ದರೂ ಮತ್ತೊಮ್ಮೆ ಸ್ವಲ್ಪ ನೀರಿನಲ್ಲಿ ತೊಳೆಯಬೇಕು.

8. ಊಟಕ್ಕೆ ಕುಳಿತಾಗ ಪಾದರಕ್ಷೆಗಳನ್ನು ಧರಿಸಿರಬಾರದು.

9. ಊಟ ಮಾಡುವ ಸಮಯದಲ್ಲಿ ಕಸ ಗುಡಿಸಬಾರದು, ಒಂದೇ ಸಮನೆ ದಿಟ್ಟಿಸಬಾರದು.

10. ಕುಡಿಯುವ ನೀರು ತುಂಬಿದ ಚೆಂಬು- ಲೋಟ ಪಕ್ಕದಲ್ಲಿರಬೇಕು.

11. ಗಂಟಲು ಮೇಲೆತ್ತಿ ಲೋಟದ ಲ್ಲಿಯೇ ನೀರು ಕುಡಿಯಬೇಕು. ಕಚ್ಚಿ ಕುಡಿಯಬಾರದು

12. ನಾಯಿಮರಿ ಅಥವಾ ನಮ್ಮ ಜೀವಿಗಳಿಗಾಗಿ ಮೊದಲು ಒಂದು ತುತ್ತು

13. ಊಟದ ವೇಳೆಗೆ ಯಾರಾದರೂ ಬಳಿಗೆ ಬಂದರೆ ಮೊದಲು ಅವರಿಗೆ ಊಟ ನೀಡಲು ಆದ್ಯತೆ ಕೊಡಬೇಕು.

14. ನೀರು ಅಥವಾ ಸಾರಿನಲ್ಲಿ ಒಮ್ಮೆ ಅಂಗೈ ತೇವ ಮಾಡಿಕೊಳ್ಳಬೇಕು.

15. ಅಂಗೈ ಮುಂಗೈ ಮೂತಿಗಳಿಗೆ ಅನ್ನ -ಮುದ್ದೆ ಅಥವಾ ತಿನ್ನುವ ಯಾವುದೂ ಮೆತ್ತಿಕೊಳ್ಳದಂತೆ ನಾಜೂಕಾಗಿರಬೇಕು.

16. ತೊಡೆಯ ಮೇಲಾಗಲೀ, ನೆಲದ ಮೇಲಾಗಲಿ ದರ್ಬಾರಿನಂತೆ ಎಡಗೈ ಹೂರಿಕೊಂಡಿರಬಾರದು.

17. ತಲೆ ಮೈಕೈ ಕೆರೆದುಕೊಳ್ಳಬಾರದು. ಕಣ್ಣು ಉಜ್ಜಬಾರದು. ಅತ್ತಲಿತ್ತ ಪದೇ ಪದೆ ತಲೆ ಎತ್ತಿ ನೋಡಬಾರದು.

18. ನಾವು ತಿನ್ನುವ ಶಬ್ದ ಪಕ್ಕದಲ್ಲಿ ಕುಳಿತವರಿಗೆ ಕೇಳಿಸಬಾರದು. ಲೊಸ ಹೊಸ ಲೊಸಗುಟ್ಟುತ್ತಾ ಅಥವಾ ಗಬಗಬ ಬುಕ್ಕಬಾರದು.

19. ಉಣ್ಣುವ ತುತ್ತು ಎಣಿಸಬಾರದು. ಮುದ್ದೆ-ರೊಟ್ಟಿ ಎಣಿಸಬಾರದು. ಊಟಕ್ಕೆ ನೀಡುವಾಗಲೇ ಆಳು ನೋಡಿ ಅನ್ನ ಬಡಿಸಬೇಕು.

20. ಇಷ್ಟುತಿಂದ ಅಷ್ಟು ತಿಂದ ಎಂದು ಮಾತನಾಡಬಾರದು.

21. ಗಂಭೀರವಾದ ಯಾವ ಸಂಗತಿಗ ಳನ್ನೂ ಪ್ರಸ್ತಾಪಿಸಬಾರದು. (ಈಗಿನ ಸೇರ್ಪಡೆ: ಟಿವಿ ಮೊಬೈಲ್ ಇತ್ಯಾದಿ ನೋಡಬಾರದು)

22. ನೆತ್ತಿಗೇರಿಸಿಕೊಳ್ಳುವಂತೆ ನಗುವುದಾ ಮಾತಾಡುವುದಾಗಲಿ ಮಾಡಬಾರದು.

23. ಊಟ ನೀಡುವ ವ್ಯಕ್ತಿಯನ್ನು ಹೊರತುಪಡಿಸಿ ಕುಟುಂಬದ ಸದಸ್ಯ ರೆಲ್ಲರೂ ಒಟ್ಟಿಗೆ ಊಟಕ್ಕೆ ಕುಳಿತು ಕೊಳ್ಳಬೇಕು.

24. ಕುಳಿತು ಸಾವಧಾನವಾಗಿ ತಿನ್ನಬೇಕೇ ಹೊರತು ನಿಂತುಕೊಂಡು, ಓಡಾಡುತ್ತಾ, ಪ್ರಯಾಣಿಸುತ್ತಾ ತಿನ್ನಬಾರದು.

25. ಮಧ್ಯದಲ್ಲಿ ಅವಶ್ಯಕವಿದ್ದರೆ ಅರ್ಥ ಮಾಡಿಕೊಂಡು ಊಟಕ್ಕೆ ಬಡಿಸುವವರು ನೀಡಬೇಕೇ ಹೊರತು ಇಷ್ಟು ಸಾಕ-ಅಷ್ಟು ಸಾಕ ಎಂದು ಅಳತೆ ಪ್ರಮಾಣ ಗಳಲ್ಲಿ ತೋರಿಸಿ ಕೇಳಬಾರದು.

26. dorivna, ಯೆಂದು ಭಾವಿಸಿ ಕಣ್ಣಿಗೊತ್ತಿಕೊಂಡು ಆರೋಗಿಸಬೇಕು. ಒಂದು ಅಗುಳನ್ನೂ ವ್ಯರ್ಥ ಮಾಡಬಾರದು.

27. ತಿನ್ನುವ ಪದಾರ್ಥವನ್ನು ಇಲಿ ಗೆಬರಾಡಿದಂತೆ ತರಿದು ತಿನ್ನಬಾರದು. ಅಥವಾ ಕೈನಲ್ಲಿ ತೂಗಿಸಿಕೊಂಡು ತಿನ್ನಬಾರದು.

28. ಊಟದೆಲೆ, ತಟ್ಟೆಯ ಪಕ್ಕದಲ್ಲಿ ಪದಾರ್ಥಗಳನ್ನು ಚೆಲ್ಲಾಡಬಾರದು.

29, ಬಿಸಿ ಆರಿಸಿಕೊಂಡು ತಿನ್ನಬೇಕು. ತುಟಿಗಳನ್ನು ಮುಚ್ಚಿಡಿದು ಬಾಯೊಳಗೆ ನಮುಲಿ ನುಂಗಬೇಕು.

30. ಒಮ್ಮೆ ಬಾಯಿಗಿರಿಸಿಕೊಳ್ಳಲು ಎಷ್ಟು ಬೇಕೋ ಅಷ್ಟನ್ನು ಮಾತ್ರ ಬೆರಳುಗಳಿಂದ ತೆಗೆದುಕೊಳ್ಳಬೇಕೇ ವಿನಃ ಅಂಗೈ ಬಳಸಬಾರದು.

31. ಸಸ್ಯಾಹಾರ ಶ್ರೇಷ್ಠ ಆಹಾರ.

32. ಊಟ ಮುಗಿದ ಬಳಿಕ ಅಗತ್ಯವಿರು ವಷ್ಟು ನೀರು ಕುಡಿಯಬೇಕು.

33. ಊಟದ ಬಳಿಕ ಅಭ್ಯಾಸವಿದ್ದಲ್ಲಿ ತಾಂಬೂಲ ಸವಿಯಬೇಕು. ಕಳ್ಳೆಬೀಜ, ಚಿನಕುರುಳಿ, ಹಣ್ಣು ಮುಂತಾದವು ಸೇವಿಸಬಹುದು.

34. ಊಟ ಕೊಟ್ಟವರ ಬಳಿ ಕೃತಜ್ಞತೆಯ ನಾಲ್ಕು ಮಾತಾಡಬೇಕು.

35. ಊಟ ಮುಗಿದ ಕೂಡಲೇ ಊಟಕ್ಕೆ ಕುಳಿತ ಜಾಗದಲ್ಲಿ ಅರೆಗಳಿಗೆಯೂ ಕೊಡಬಾರದು.

36. ಕೈತೊಳೆದುಕೊಂಡು ಊಟ ಮಾಡಿ ದವರೇ ಊಟದ ತಟ್ಟೆ ತೊಳೆದಿಡಬೇಕು.

37. ಹೊತ್ತು ಮೀರಿಯಾಗಲೀ, ಮುಂ ಚಿತವಾಗಲಿ ಊಟ ಮಾಡಬಾರದು.

38. ಉಪ್ಪು ಹುಳಿ ಖಾರ ಯಾವುದೇ ವ್ಯತ್ಯಾಸಗಳಿದ್ದರೂ ಆಸಮಾಧಾನ ವ್ಯಕ್ತಪ ಡಿಸುವುದಾಗಲೀ, ಸಿಟ್ಟಿಗೇಳುವುದಾಗಲೀ ಮಾಡಬಾರದು.

39. ಮುರಿಯಬಾರದು.

40. ಊಟದ ಬಳಿಕ ಗಾಳಿಗೆ ಮೈಯೊಡ್ಡಿ ನಾಲೆಜ್ಜೆ ನಡೆದರೆ ಚೆಂದ.

41. ಎದೆ ಬಗ್ಗಿಸಿ ಊಟ ಮಾಡಬೇಕೇ ಹೊರತು ಎದೆ ಸೆಟೆದು (ಸೇದಿಕೊಂಡು) ಊಟ ಮಾಡಬಾರದು.

42. ಎಂಜಲ ಕೈನಲ್ಲಿ ತಟ್ಟಿ ಲೋಟ ಇತರ ಯಾವುದೇ ಪಾತ್ರೆ ಪಗಡಿ ಮುಟ್ಟಬಾರದು.

43. ಸಾರಿನ ಚೌಟು ಅನ್ನಕ್ಕೂ ಅನ್ನದ ಚಮಚವನ್ನು ಪಾಯಸಕ್ಕೂ ಮುಟ್ಟಿಸದೆ ಹೀಗೆ ಎಲ್ಲವೂ ಪ್ರತ್ಯೇಕವಾಗಿ ಇರಿಸಬೇಕು

44. ಎಂಜಲು ಮಾಡಿದ ಪದಾರ್ಥ ಗಳನ್ನು ಇತರರಿಗೆ ನೀಡಬಾರದು.

45. ಊಟದ ಬಳಿಕವೂ ಬಾಯಿ ಮುಕ್ಕಳಿಸುವುದನ್ನು ಮರೆಯಬಾರದು.

46. ಊಟ ಮಾಡಿದ ತಕ್ಷಣವೇ ಮಲಗ ಬಾರದು ಅಥವಾ ಮಲಗಿಕೊಂಡು ಏನನ್ನೂ ತಿನ್ನಬಾರದು.

47. ನಿದ್ರೆಗಣ್ಣಿನಲ್ಲಿ ತೂಕಡಿಸುತ್ತಾ ಊಟ ಮಾಡಬಾರದು.


Spread the love

Leave a Comment

error: Content is protected !!