Sadguru Zone

Information About Human Life.

ಶ್ರೀಪಾದ ಶ್ರೀವಲ್ಲಭರ ದಿವ್ಯ ಚರಿತ್ರೆ -Sripada Srivallabha divya charitamruta chapter-1

ವ್ಯಾಘ್ರಶ್ವರ ಶರ್ಮ ವೃತ್ತಾಂತ

         Sripada Srivallabha divya charitamruta in kannada – Chapter-1  ಶ್ರೀ ಮಹಾಗಣಪತಿ, ಶ್ರೀ ಮಹಾ ಸರಸ್ವತಿ, ಅಸದ್ಗುರು ಪರಂಪರಗೆ, ಶ್ರೀಕೃಷ್ಣ ಭಗವಾನರಿಗೆ, ಸಮಸ್ತ ದೇವದೇವತಾ ಗಣಗಳಿಗೆ ಪ್ರಮಾಣಪೂರ್ವಕ ಶ್ರದ್ದಾಂಜಲಿ ಸಮರ್ಪಿಸುತ್ತಾ, ಶ್ರೀ ಮದಖಿಲಾಂಡ ಕೋಟಿ ಬ್ರಹ್ಮಾಂಡನಾಯಕರಾದ, ಶ್ರೀ ದತ್ತ ಪ್ರಭುಗಳ ಹೊಸಾವತರಣ (ಶ್ರೀಪಾದ ವಲ್ಲಭರ) ವೈಭವವನ್ನು ವರ್ಣಿಸಲು ಇಚ್ಛೆ ಪಟ್ಟಿದ್ದೇನೆ.

        ಶ್ರೀದತ್ತಾತ್ರೇಯರು ಅತಿ ಪ್ರಾಚೀನರು ಮತ್ತು ನಿತ್ಯನೂತನರು. ಶ್ರೀ ದತ್ತಾತ್ರೇಯರು ಈ ಕಲಿಯುಗದೊಳು ಆಂಧ್ರಪ್ರದೇಶದ ಗೋದಾವರಿ ನದಿ ದಡಪ್ರಾಂತ ಶ್ರೀಪೀಠಿಕಾಪುರವೆಂಬ ಗ್ರಾಮದಂದು ಶ್ರೀಪಾದ ಶ್ರೀವಲ್ಲಭಎಂಬುವ ಹೆಸರಿನಲ್ಲಿ ಅವತರಿಸಿದರು. ಶ್ರೀಗಳ ದಿವ್ಯ ಚರಿತೆಯನ್ನು, ದಿವ್ಯಲೀಲಾ ವೈಭವವನ್ನು ವರ್ಣಿಸಲು ಮಹಾ ಮಹಾ ಪಂಡಿತರಿಗೇ ಅಸಾಧ್ಯ. ಹಾಗಿರಲೂ ವಿದ್ಯಾಗಂಧ ಎಳ್ಳಷ್ಟಿಲ್ಲದೆ, ಅಲ್ಪನಾದ ನಾನು, ಅವರ ಚರಿತ್ರೆಯನ್ನು ವರ್ಣಿಸಲು ಮುಂದಾಗಿರುವುದು ಕೇವಲ ಅವರ ಸಂಕಲ್ಪ, ದೈವಾಜ್ಞೆ ಮತ್ತು ಅವರ ದಿವ್ಯಾಶೀಸ್ಸುಗಳಿಂದಲೇ ಎಂದು, ಸರ್ವರಿಗೂ ವಿನಯದಿಂದ ತಿಳಿಸುತ್ತೇನೆ.

           ನನ್ನ ಹೆಸರು ಶಂಕರ ಭಟ್ಟು, ನಾನು ಕರ್ನಾಟಕ ದೇಶಸ್ಥ, ಸ್ಮಾರ್ತ, ಭಾರಧ್ವಾಜ ಗೋತ್ರೋದ್ಭವ, ಶ್ರೀಕೃಷ್ಣನ ದರ್ಶನಾರ್ಥ ನಾನು ಉಡುಪಿ ಕ್ಷೇತ್ರಕ್ಕೆ ತೆರಳಿದ್ದೆ. ಅಲ್ಲಿ ಬಾಲಕೃಷ್ಣನವಿಲು ಪಿಂಛದಿಂದ, ಮುಗ್ಧ ಮನೋಹರವಾಗಿ ದರ್ಶನವಿತ್ತು, ಕನ್ಯಾಕುಮಾರಿಯ ಶ್ರೀ ಕನ್ಯಕಾ ಪರಮೇಶ್ವರೀ ದೇವಿ ದರ್ಶನ ಮಾಡಲು ಆಜ್ಞಾಪಿಸಿದರು.

           ನಾನು ಕನ್ಯಾಕುಮಾರಿಯಲ್ಲಿನ ಶ್ರೀ ಕನ್ಯಕಾ ಪರಮೇಶ್ವರೀ ದೇವಿಯನ್ನು ದರ್ಶಿಸಿದೆ. ಮೂರು ಸಾಗರಗಳ ಸಂಗಮದಲ್ಲಿ ಪುಣ್ಯ ಸ್ನಾನವನ್ನು ಮಾಡಿದನು. ಒಂದಾನೊಂದ ಮಂಗಳವಾರ ಶ್ರೀ ದೇವಿಯ ದರ್ಶನಾರ್ಥ ದೇಗುಲ ಪ್ರವೇಶಿಸಿದೆ. ಅರ್ಚಕರು ನಿಷ್ಠೆಯಿಂದ ಪೂಜೆ ಮಾಡುತ್ತಿದ್ದರು. ಆತ, ನನ್ನ ಕೈಯಿಂದ ಕೆಂಬಣ್ಣದ ಹೂವುಗಳನ್ನು ಸ್ವೀಕರಿಸಿ, ಪೂಜಿಸುತ್ತಿರಲು, ಅಂಬೆ ನನ್ನನ್ನ ಕರುಣಾಪೂರ್ವಕವಾಗಿ ನೋಡುತ್ತಾ, “ಶಂಕರಾ! ನಿನ್ನ ಎದೆಯಲ್ಲಿನ ಪವಿತ್ರ ಭಕ್ತಿಗೆ ಸಂತುಷ್ಟಳಾಗಿದ್ದೇನೆ. ನೀನು ಕುರುವಪುರಕ್ಕೆ ತೆರಳಿ, ಅಲ್ಲಿರುವ ಶ್ರೀಪಾದ ಶ್ರೀವಲ್ಲಭರನ್ನು ದರ್ಶಿಸಿ, ಜನ್ಮಸಾರ್ಥಕ ಮಾಡಿಕೋ. ಶ್ರೀಪಾದ ಶ್ರೀವಲ್ಲಭರ ದರ್ಶನದಿಂದ ಮಾತ್ರವೇ ನಿನ್ನ ಮನಸ್ಸಿಗೂ, ಆತ್ಮಕ್ಕೂ ಮತ್ತು ಸರ್ವೇಂದ್ರಿಯಗಳಿಗೂ ತಿಳಿಸಲಾರದ ಅನುಭವವನ್ನು ಪಡೆಯುವೆ” ಎಂದು ಹೇಳಿದರು.

          ನಾನು ತಾಯಿಯ ಅನುಗ್ರಹವನ್ನು ಹೊಂದಿ, ಪುಣ್ಯಧಾಮದಿಂದ ಪಯಣವನ್ನು ಮುಂದುವರೆಸುತ್ತಾ, ಸ್ವಲ್ಪ ದೂರದಲ್ಲೇ ಇದ್ದ ಮರುತ್ವಮಲೈ ಎಂಬುವ ಗ್ರಾಮಕ್ಕೆ ಸೇರಿದೆನು. ಶ್ರೀ ಹನುಮಂತ ಸಂಜೀವಿನೀ ಪರ್ವತವನ್ನು ಹಿಂತಿರುಗಿ ಹಿಮಾಲಯಕ್ಕೆ ತೆಗೆದುಕೊಂಡು ಹೋಗುವಾಗ, ಅದರಿಂದ ಒಂದು ಭಾಗ ಜಾರಿ ಕೆಳಗೆ ಬಿತ್ತು ಎಂದೂ, ಅದನ್ನ ಮರುತ್ವ ಮಲೈ ಎಂದು ಕರೆಯುವರೆಂದು ತಿಳಿದುಕೊಂಡೆ.

          ಮರುತ್ವ ಮಲೈ ಗ್ರಾಮದಲ್ಲಿನ ಆ ಬೆಟ್ಟ ನೋಡಲೂ ಬಹುಚಂದ. ಅದರಲ್ಲಿ ಕೆಲ ಗುಹೆಗಳು ಇವೆ. ಆ ಪ್ರದೇಶ, ಸಿದ್ಧ ಪುರುಷರು ಅದೃಶ್ಯದಲ್ಲಿ ತಪಸ್ಸು ಮಾಡಿಕೊಳ್ಳುವ ಪರ್ವತ ಭೂಮಿ ಎಂದು ತಿಳಿದುಕೊಂಡೆನು. ನನ್ನ ಅದೃಷ್ಟ ಚೆನ್ನಾಗಿದ್ದರೇ, ಯಾವ ಮಹಾಪುರುಷನನ್ನಾದರೂ ನೋಡದಿರುವನಾ ಎಂದು ಆಗುಹೆಗಳತ್ತ ನೋಡುತ್ತಿದ್ದನು. ಒಂದು ಗುಹ ದ್ವಾರದ ಬಳಿ ಮಾತ್ರ ಒಂದು ದೊಡ್ಡ ಹುಲಿ ನಿಂತಿತ್ತು. ನನ್ನ ಸರ್ವಾಂಗಗಳಲ್ಲಿಯೂ ನಡಕ ಮತ್ತು ದಡೆ ಶುರುವಾಯಿತು, ಭಯಕಂಪಿತನಾದೆ. ನಾನು ಒಂದು ಬಾರಿಗೆ ಶ್ರೀಪಾದ ಶ್ರೀವಲ್ಲಭಾ! ದತ್ತ ಪ್ರಭೂ!’ ಎಂದು ಗಟ್ಟಿಯಾಗಿ ಕಿರುಚಿದೆನು. ಆ ದೊಡ್ಡ ಹುಲಿ, ಸಾದು ಪ್ರಾಣಿಯಂತೆ ನಿಶ್ಚಲವಾಗಿತ್ತು. ಆಗವಿಯಿಂದ ಒರ್ವ ವೃದ್ಧ ತಪಸ್ವಿ ಈಚೆಗೆ ಬಂದರು. ಮರುತ್ವಮಲೈ ಪ್ರಾಂತವೆಲ್ಲವೂ ಒಂದೇಬಾರಿಗೆ ಶ್ರೀಪಾದ ಶ್ರೀವಲ್ಲಭ ನಾಮದಿಂದ ಪ್ರತಿಧ್ವನಿಸಿತು.

         ಆಗ ಆ ವೃದ್ಧ ತಪಸ್ವಿ, “ಮಗು! ನೀನು ಧನ್ಯನು. ಶ್ರೀದತ್ತ ಪ್ರಭು ಈ ಕಲಿಯುಗದಲ್ಲಿ ಶ್ರೀಪಾದ ಶ್ರೀವಲ್ಲಭ ನಾಮದಿಂದ ಅವತರಿಸಿದ್ದಾರೆಂದು, ಮಹಾ ಸಿದ್ಧ ಪುರುಷರಿಗೂ, ಮಹಾ ಯೋಗಿಗಳಿಗೂ, ಜ್ಞಾನಿಗಳಿಗೂ ಮತ್ತು ನಿರ್ವಿಕಲ್ಪವಾದ ಸಮಾಧಿ ಸ್ಥಿತಿಯಲ್ಲಿರತಕ್ಕಂತಹ ಪರಮಹಂಸರಿಗೆ ಮಾತ್ರ ವಿದಿತ. ನೀನು ಅದೃಷ್ಟವಂತನಾದ ಕಾರಣ ಇಲ್ಲಿಗೆ ಬಂದಿರುವೆ. ಇದು ತಪೋಭೂಮಿ, ಸಿದ್ಧಭೂಮಿ, ನಿನ್ನ ಇಚ್ಛೆ ಪೂರೈಸುವುದು. ನಿನಗೆ ತಪ್ಪದೇ ಶ್ರೀಪಾದ ಶ್ರೀವಲ್ಲಭರ ದರ್ಶನಭಾಗ್ಯ ಲಭಿಸುವುದು. ಈ ಗವಿ ಮುಂಭಾಗದಲ್ಲಿರುವ ದೊಡ್ಡ ಹುಲಿ, ಒರ್ವ ಜ್ಞಾನಿ. ಅವರಿಗೆ ನಮಸ್ಕರಿಸು” ಎಂದು ನುಡಿದರು.

        ನಂತರ, ನಾನು ದೊಡ್ಡ ಹುಲಿ ರೂಪಧಾರಿ ಜ್ಞಾನಿಗೆ ನಮಸ್ಕರಿಸಿದೆನು. ತಕ್ಷಣ ಆ ಹುಲಿ ‘ಓಂ’ಕಾರವನ್ನು ಮಾಡಿತು. ಆ ಧ್ವನಿ, ಮರುತ್ವಮಲೈ ಪ್ರದೇಶವೆಲ್ಲಾ ಪ್ರತಿಧ್ವನಿಸಿತು. ಸುಶ್ರಾವ್ಯವಾಗಿ “ಶ್ರೀಪಾದರಾಜಂ ಶರಣಂ ಪ್ರಪದ್ಯೆ” ಎಂದು ಆಲಾಪಿಸಿತು. ನಾನು ಈ ವಿಚಿತ್ರವನ್ನು ವೀಕ್ಷಿಸುತ್ತಿದ್ದೆನು. ಆದೊಡ್ಡಹುಲಿ ಕ್ರಮೇಣ, ಅದ್ಭುತವಾಗಿ ಒರ್ವ ದಿವ್ಯದೇಹದ ಮಹಾತ್ಮರಾಗಿ ಪರಿಣಮಿಸಿತು. ಅ ದಿವ್ಯಪುರುಷ, ವೃದ್ಧ ತಪಸ್ವಿಗೆ ನಮಸ್ಕರಿಸಿ ಆಕಾಶ ಮಾರ್ಗವಾಗಿ ಪ್ರಕಾಶಿಸುತ್ತಾ ಅಂತರ್ಧಾನವಾದರು. ನನ್ನ ಎದುರಲ್ಲಿದ್ದ ಆ ವೃದ್ಧ ತಪಸ್ವಿ ಮುಗುಳಗೆಯಿಂದ ನನ್ನನ್ನು ಗುಹೆ ಒಳಗೆ ಕರೆದೊಯ್ದರು.

        ಕಾಠಕಚಯನ’ವೆಂಬ ದೊಡ್ಡ ಯಜ್ಞವನ್ನು ಶ್ರೀ ಪೀಠಿಕಾಪುರದಲ್ಲಿ ನಿರ್ವಹಿಸಿದರು. ಶ್ರೀ ಶಿವಪಾರ್ವತಿಯರನ್ನು ಸಹಾ ಆಹ್ವಾನಿಸಿದ್ದರು. ನಂತರ ಪಡೆದ ವರ ಪ್ರಕಾರ ಭಾರಧ್ವಾಜ ಗೋತ್ರದಲ್ಲಿ ಅನೇಕ ಮಹಾತ್ಮರು, ಸಿದ್ದಪುರುಷರು, ಜ್ಞಾನಿಗಳು ಮತ್ತು ಯೋಗಿಗಳು ಜನ್ಮ ಪಡೆದಿರುತ್ತಾರೆ ಮತ್ತು ಆ ಯಜ್ಞವು ಪೀಠಿಕಾಪುರದಲ್ಲೇ ನಡೆಯಿತು. ಈ ವಿಷಯ, ಕಲ್ಕಿ ಅವತಾರ ಭೂಮಿಯಾದ ‘ಶಂಬಲ’ ಗ್ರಾಮದಲ್ಲಿ ಭದ್ರಪಡಿಸಲಾದ, ಪೈಂಗ್ಯಬ್ರಾಹ್ಮಣ ಮತ್ತು ಸಾಂದ್ರಸಿಂಧು ವೇದದಲ್ಲಿ ತಿಳಿಸಲಾಗಿದೆ. ಕಲಿಯುಗ ಪರಿಸಮಾಪ್ತಿಗೊಂಡು ಸತ್ಯಯುಗ ಬಂದಾಗ, ಶ್ರೀ ದತ್ತಾವತಾರ ಮೂರ್ತಿಯಾದ ಶ್ರೀಪಾದ ಶ್ರೀವಲ್ಲಭರು ಶ್ರೀ ಪೀಠಿಕಾಪುರಿಗೆ ಭೌತಿಕ ರೂಪದಲ್ಲಿ ಆಗಮಿಸುವರು. ಸತ್ಕರ್ಮಿಗಳಿಗೆ ಮಾತ್ರ ದತ್ತ ಭಕ್ತಿಸಿದ್ದ. ಅಂತಹ ಸ್ಥಿತಿಯಲ್ಲಿ ಮಾತ್ರ ಯಾವುದೇ ಯುಗವಾಗಲಿ ಯಾವುದೇ ಕಾಲವಾಗಲಿ, ಶ್ರೀಪಾದ ಶ್ರೀವಲ್ಲಭರದರ್ಶನ, ಸ್ಪರ್ಶನ ಮತ್ತು ಸಂಭಾಷಣೆ ಸಿದ್ಧಿಸುವುದು. ನಿನಗೆ ಶ್ರೀಪಾದ ಶ್ರೀವಲ್ಲಭರ ಕರುಣೆ ಲಭ್ಯವಾಗಿದೆ. ನೀವೆಲ್ಲರೂ ಇಲ್ಲಿಯೇ ಗುಹೆಗಳಲ್ಲಿ ನಿಮಗೆ ತಿಳಿಸಿದ ಕ್ರಿಯಾ ಯೋಗವನ್ನು ನಿಷ್ಠೆಯಿಂದ ಅಭ್ಯಸುತ್ತಿರಿ. ಆತ್ಮಜ್ಞಾನ ಸಿದ್ಧಿಸುವುದು” ಎಂದು ಹೇಳಿ ಅವರ ಗುರುಗಳಾದ ಬಾಬಾಜೀ ದರ್ಶನಾರ್ಥವಾಗಿ ದ್ರೋಣಗಿರಿಗೆ ನಂತರ ಬರುವೆನೆಂದು ಹೊರಟು ಹೋದರು.

         ವ್ಯಾಘ್ರಶ್ವರ ಶರ್ಮ ಗುರು ಆದೇಶದಂತೆ ಒಂದು ಗವಿಯಲ್ಲಿ ಕುಳಿತಿದ್ದನೇ ಹೊರತೂ, ಕ್ರಿಯಾಯೋಗ ಪದ್ಧತಿಗಳೇ ಆಗಲಿ, ಆತ್ಮಜ್ಞಾನ ವಿಷಯವೇ ಆಗಲಿ ತಲೆಗೆ ಹತ್ತಲಿಲ್ಲ. ಹೀಗೆ ಯೋಚಿಸಿದನು “ಗುರುಗಳು ನನ್ನನ್ನು ‘ಒರೇಮ್ ವ್ಯಾಘ್ರಮಾ’ ಎಂದು ಸದಾ ಕರೆಯುವರು, ಅಂದರೇ ‘ಎಲೈ! ವ್ಯಾಘ್ರವೇ’. ಗುರುಬಾಂಧವರು ವ್ಯಾಘ್ರಾಜಿನದ ಮೇಲೆ ಕುಳಿತು ಧ್ಯಾನ ಮಾಡುವರು. ಹಾಗಿದ್ದಲ್ಲಿ ವ್ಯಾಘ್ರವು ಎಷ್ಟು ದೊಡ್ಡದಾಗಿರ ಬಹುದು? ಆಗ ನನ್ನ ಆತ್ಮವ್ಯಾಘ್ರವೇ ಮತ್ತು ಧ್ಯಾನ ಮಾಡಬೇಕಾದದ್ದು ವ್ಯಾಘ್ರವನ್ನೇ. “ನಾನು ವ್ಯಾಘ್ರರೂಪಧಾರಿ ಆದರೇ ಆತ್ಮಜ್ಞಾನ ಪಡೆದ ಹಾಗಿಯೇ ಎಂದುಕೊಳ್ಳಬಹುದು”.

        ಒಂದು ವರುಷ ಕಳೆದೇ ಹೋಯಿತು, ಗುರುಗಳು ಬಂದದ್ದೇ, ಪ್ರತಿ ಗುಹೆ ಬಳಿ ಹೋಗಿ ಶಿಷ್ಯಂದಿರನ್ನು ಪರೀಕ್ಷಿಸುತ್ತಿದ್ದರು. ವ್ಯಾಘ್ರಶ್ವರನ ಗುಹೆಯಲ್ಲಿ ಅವನಿಲ್ಲ, ಬಳಕ ಒಂದು ವ್ಯಾಘ್ರವು ಕಂಡುಬಂದಿತು. ಗುರುಗಳು ಯೋಗ ದೃಷ್ಟಿಯಿಂದ, ತನ್ನ ಶಿಷ್ಯ ತೀವ್ರವಾಗಿ ವ್ಯಾಘ್ರವನ್ನೇ ಧ್ಯಾನಿಸುತ್ತಿದ್ದರಿಂದ ವ್ಯಾಘ್ರವಾಗಿರುವನೆಂದು ಆತ್ಮಶುದ್ಧಿಗೆ ಸಂತಸಿಸಿ ಓಂಕಾರವನ್ನು ಪಾಠಮಾಡಿ, “ಶ್ರೀ ಪಾದರಾಜಂ ಶರಣಂ ಪ್ರಪದ್ಯ” ಎಂಬುದನ್ನು ಮಂತ್ರವಾಗಿ ಮನನ ಮಾಡಲು ಉಪದೇಶಿಸಿದರು.

       ವ್ಯಾಘ್ರಶ್ವರರು ಅನಂತ ಭಕ್ತಿಯಿಂದ ತನ್ನ ಮಂತ್ರವನ್ನುಚ್ಛರಿಸುತ್ತಾ ವ್ಯಾಘ್ರರೂಪದಲ್ಲಿಯೇ ಕುರುವಪುರವನ್ನು ಸಮೀಪಿಸಿದರು. ಜಲಮಾರ ಒಂದುಳಿದಿತ್ತು. ಅತ್ತಭಕ್ತಜನ ಸಮೂಹದಲ್ಲಿದ್ದ ಶ್ರೀಪಾದ ಶ್ರೀವಲ್ಲಭರು, ‘ನನ್ನ ಭಕ್ತ ಒರ್ವನು, ನನ್ನನ್ನು ಕರೆಯುತ್ತಿದ್ದಾನೆ, ಇದೋ ಬಂದೆ’ನೆಂದು ಹೇಳಿ ತನ್ನ ಪ್ರಕಾಶಿಸುವ ಶರೀರದಲ್ಲೇ ನೀರಿನ ಮೇಲೆ ನಡೆದುಕೊಂಡು ಹೋದರು. ಹಾಗೆ ಅವರು ಕಾಲಿಡುವಾಗ ಒಂದೊಂದು ಹೆಜ್ಜೆಗೂ ಒಂದು ಕಮಲ ಉದ್ಭವಿಸುತ್ತಿತ್ತು. ತನ್ನ ಬಳಿ ಬಂದ ಅ ಪರಮ ತೇಜಸ್ವಿಯನ್ನು ಭಕ್ತಿ ಮತ್ತು ವಿನಯಪೂರ್ವಕವಾಗಿ ಪಾದ ನಮಸ್ಕಾರ ಮಾಡಿಕೊಳ್ಳಲು, ಶ್ರೀಪಾದ ಶ್ರೀವಲ್ಲಭರು ಆ ವ್ಯಾಘ್ರವನ್ನೇರಿ ನೀರಿನ ಮೇಲೆ ತೇಲಿಯಾಡುತ್ತಾ ಕುರುವಪುರ ಸೇರುವುದನ್ನು ಭಕ್ತಕೋಟಿ ದರ್ಶಿಸಿ ಭಾಗ್ಯಶಾಲಿಗಳಾದರು.

        ಶ್ರೀದತ್ತ ಪುರಾಣದಲ್ಲಿರುವಂತೇ ಶ್ರೀದತ್ತ ದೇವರೇ ಧರ್ಮಶಾಸ್ತ ಅಯ್ಯಪ್ಪನಾಗಿ, ಶ್ರೀ ದೇವೇಂದ್ರರು ಹುಲಿಯಾಗಲೂ, ಅದನ್ನೇರಿ ತನ್ನ ರಾಜಧಾನಿಗೆ ತಲುಪಿದರು. ಹೀಗೇ ವ್ಯಾಘ್ರವನ್ನೇರಿ ಬಂದ ಶ್ರೀಪಾದ ಶ್ರೀವಲ್ಲಭರು ‘ಅಂಬೆ, ಜಗನ್ಮಾತೆ’ ಸಹಾ ಎಂದು ಅನೇಕರ ಭಾವನೆ.

      ಶ್ರೀವಲ್ಲಭರು ಆ ವ್ಯಾಘ್ರವಾಹನನಾಗಿ ಕುರುವಪುರಂ ಸೇರಿ, ಶ್ರೀಗಳು ಅದರಿಂದ ಇಳಿದಕೂಡಲೇ ಆ ವ್ಯಾಘ್ರವು ಮಾನವನಾಗಿ ಪರಿಣಮಿಸಿತು. ಆ ಕಾಂತಿಯುತ ಮಹಾಪುರುಷ, ಆತನ ಪೂರ್ವಜನ್ಮ ರೂಪವಾದ ವ್ಯಾಘ್ರದ ಚರ್ಮವನ್ನು ಶ್ರೀಯವರು ಆಸನವಾಗಿ ಉಪಯೋಗಿಸಿಕೊಳ್ಳಬೇಕೆಂದು ಬೇಡಿದರು. ‘ಸರೇ’ ಎಂದು ಪ್ರೇಮದಿಂದ “ಮಗನೇ ವ್ಯಾಘ್ರಶ್ವರನೇ! ನೀನು ಹಿಂದಿನ ಒಂದ ಜನುಮದಲ್ಲಿ ಸಾಕಷ್ಟು ಬಲವಂತನಾಗಿದ್ದು ಹುಲಿಗಳನ್ನು ಹಿಂಸೆ ಮಾಡುವುದು, ಆದರೊಂದಿಗೆ ಹೋರಾಡುವುದು ಅವುಗಳಿಗೆ ಆಹಾರವಿಲ್ಲದೇ ಬಂಧಿಸಿ ನಂತರ ವಿನೋದಕ್ಕೆ ಉಪಯೋಗಿಸಿಕೊಳ್ಳುವುದು ಮುಂತಾದನ್ನು ಮಾಡುತ್ತಿದ್ದೆ. ಆದ್ದರಿಂದ, ನೀನು ನಿನ್ನ ಪಾಪಕರ್ಮ ಸವಿಯಲು ಅನೇಕ ಜಂತುಜನ್ಮತಾಳಬೇಕಿತ್ತು. ಆದರೆ ನನ್ನ ಅನುಗ್ರಹದಿಂದ ನಿನಗೆ ಒಂದು ದೊಡ್ಡ ಹುಲಿ ಜನ್ಮದಿಂದಲೇ ಎಲ್ಲಾ ಕರ್ಮಗಳು ನಾಶವಾಗಿವೆ. ನೀನು ವ್ಯಾಘ್ರರೂಪ ಇಛಿಸಿರುವುದರಿಂದ, ಯಾವ ಕ್ಷಣದಲ್ಲಿ ಆದರೂ ವ್ಯಾಘ್ರವಾಗಲು ವರ ನೀಡಿದ್ದೇನೆ. ಹಿಮಾಲಯದ ಮಹಾನ್ ಋಷಿಗಳ ದರ್ಶನನಿನಗೆ ಲಭಿಸುವುದು. ಯೋಗ ಮಾರ್ಗದಲ್ಲಿ ನೀನು ಉಚ್ಛಸ್ಥಿತಿಯನ್ನು ಹೊಂದುವೆ” ಎಂದು ಆಶೀರ್ವದಿಸಿದರು.

        ಕೆಲ ಸಮಯದ ಹಿಂದೆ ಅಂತಹ ಮಹಾನ್ ಪುರುಷನನ್ನೇ ವ್ಯಾಘ್ರ ರೂಪದಲ್ಲಿ ಶಂಕರ ಭಟ್ಟರು ದರ್ಶಿಸಿ ಕೊಂಡಿದ್ದರು. ಸಾಮಾನ್ಯ ಮಾನವನಿಂದ ತಮ್ಮತಮ್ಮಗುಹೆಗಳಲ್ಲೇ ಇರುವ ಮಹಾಯೋಗಿಗಳಿಗೆ ತೊಂದರೇ ಆತಂಕಗಳು ಆಗದಂತೇ, ವ್ಯಾಘ್ರ ರೂಪದಲ್ಲಿ ಕಾವಲು ಕಾಯುತ್ತಾ, ಅವರು ಪರಸ್ಪರ ಭಾವಪ್ರಸಾರ ಸಹಾ ಬೇರೆ ಬೇರೆ ಗುಹಗಳಿಂದ ನಡೆಸಿಕೊಳ್ಳಲೂ ಅನುಕೂಲವನ್ನು ಈ ಮಹಾ ವ್ಯಾಘ್ರಶ್ವರ ಶರ್ಮ ಮಾಡಿಕೊಟ್ಟಿದ್ದಾರೆ. ಇದೆಲ್ಲಾ ಶ್ರೀದತ್ತ ಪ್ರಭು ಲೀಲೆ.

  ಜಯವಾಗಲಿ  ಜಯವಾಗಲಿ  ಶ್ರೀ ಪಾದ ಶ್ರೀ ವಲ್ಲಭರಿಗೆ  ಜಯವಾಗಲಿ

Leave a Reply

Your email address will not be published. Required fields are marked *