Sadguru Zone

Information About Human Life.

ಗೃಹ ಪ್ರಾರಂಭಕ್ಕೆ
ಸರಿಯಾದ ಮಹೂರ್ತಗಳು

ಗೃಹ ಪ್ರಾರಂಭಕ್ಕೆ
ಸರಿಯಾದ ಮಹೂರ್ತಗಳು.

ಕಟಕ ದನಸು ಮೀನ ರಾಶಿಗಳಲ್ಲಿ ಗುರು ಅಥವಾ ಶುಕ್ರಇರುವ ಲಗ್ನ,

ಸ್ಥಿರ ಲಗ್ನ
ದ್ವಿ ಸ್ವಭಾವ ಲಗ್ನಗಳಲ್ಲಿ ಶುಭ ಗ್ರಹಗಳು ಇದ್ದಾಗ
ಲಗ್ನವನ್ನು ಶುಭ ಗ್ರಹಗಳು ನೋಡುತ್ತಿರುವಾಗ ಬಹಳ ಒಳ್ಳೆಯದು.

ಜಾತಕನ ಜನ್ಮ ಲಗ್ನದಿಂದ ಚಂದ್ರನು ನಾಲ್ಕು ಅಥವಾ 10ನೇ ಮನೆಯಲ್ಲಿದ್ದು
ಗುರು ಕುಜ ಶನಿ
11ನೇ ಮನೆಯಲ್ಲಿದ್ದರೆ ಆ ಮನೆ ನೂರು ವರ್ಷಗಳು ಗಟ್ಟಿಯಾಗಿದ್ದು ಸುಖ ಸಂತೋಷದಿಂದ ತುಂಬಿರುತ್ತದೆ.

ಗುರು ಲಗ್ನದಲ್ಲಿದ್ದು ಶುಕ್ರ ಐದನೇ ಮನೆಯಲ್ಲಿ ಅಥವಾ ರವಿ ಮೂರನೇ ಮನೆಯಲ್ಲಿ ಕುಜ ಆರನೇ ಮನೆಯಲ್ಲಿ ಇದ್ದರೆ ಆ ಮನೆಯೂ ಶತಮಾನಗಳ ಕಾಲ ಸಂಪತ್ತಿನಿಂದ ಕೂಡಿರುತ್ತದೆ.

ಚಂದ್ರನು ಲಗ್ನದಲ್ಲಿ ಇದ್ದು ಗುರು ಅಥವಾ ಬುಧ ನಾಲ್ಕನೇ ಮನೆಯಲ್ಲಿ ಬಲಿಷ್ಠರಾಗಿದ್ದರೆ ಆ ಕಟ್ಟಡ 60 ವರ್ಷಗಳು ಗಟ್ಟಿಯಾಗಿರುತ್ತದೆ.
ಶುಕ್ರ ಲಗ್ನದಿಂದ ಹತ್ತನೇ ಮನೆಯಲ್ಲಿದ್ದು ಬುಧ ಮೂರನೇ ಮನೆ ಮತ್ತು ಗುರು ಇಳಿ ಮುಖನಾಗಿದ್ದರೆ ಕಟ್ಟಡ 600 ವರ್ಷಗಳು ಬಾಳುತ್ತದೆ.

ಗುರು ಲಗ್ನದಲ್ಲಿದ್ದು ಬುಧ ಶುಕ್ರನ ಮನೆಯಲ್ಲಿದ್ದು
ಗೃಹ ಆರಂಭ ಮಾಡಿದರೆ ಆ ಗೃಹ 800 ವರ್ಷಗಳು ಕಾಲ ಇರುತ್ತದೆ.

ಕಟ್ಟಡವನ್ನು ಗುರುವಾರ ಆರಂಭಿಸಿ ಗುರು ಪೂರ್ವಾಷಾಡ ಅಥವಾ ಶ್ರವಣ ರೋಹಿಣಿ ಉತ್ತರಾಷಾಡ ಉತ್ತರ
ಉತ್ತರ ಭಾದ್ರ ಮೃಗಶಿರ ನಕ್ಷತ್ರಗಳಲ್ಲಿ ಇದ್ದಲ್ಲಿ ಆ ಮನೆಯ ಸುಖ ಸಂತೋಷ ಸಕಲ ಸಂಪತ್ತುಗಳಿಂದ ಕೂಡಿರುತ್ತದೆ.

ಶುಕ್ರ ಮತ್ತು ಗುರು ನಗ್ನದಲ್ಲಿದ್ದಾಗ ಮನೆ ಕಟ್ಟಿದಲ್ಲಿ ಅಗ್ನಿ ಭಯವಿರುವುದಿಲ್ಲ.

ಓಂ ನಮೋ ನಾರಾಯಣಾಯ ನಮಃ

Leave a Reply

Your email address will not be published. Required fields are marked *